Advertisement

ಬಿಎಸ್‌ಎನ್‌ಎಲ್‌ನಿಂದ, 339 ರೂ.ಗೆ 2ಜಿಬಿ ಡಾಟಾ 

03:17 PM Mar 17, 2017 | |

ನವದೆಹಲಿ: ಟೆಲಿಕಾಂ ಕಂಪನಿಗಳ ನಡುವಿನ ಸ್ಪರ್ಧೆ ಮುಂದುವರಿದಿದ್ದು, ಇದೀಗ ರಿಲಯನ್ಸ್‌ ಜಿಯೋಕ್ಕೆ
ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಸಡ್ಡು ಹೊಡೆದಿದೆ. ಮಾಸಿಕ 339 ರೂ.ಗಳಿಗೆ ದಿನಕ್ಕೆ 2ಜಿಬಿ 3ಜಿ ಡಾಟಾ ಮತ್ತು ಬಿಎಸ್‌ಎನ್‌ಎಲ್‌ ಸಂಪರ್ಕಗಳಿಗೆ ಅನಿಯಮಿತ ಕರೆ ಆಫ‌ರನ್ನು ಅದು ಒದಗಿಸಿದೆ.

Advertisement

ಇದರೊಂದಿಗೆ ದಿನಕ್ಕೆ 25 ನಿಮಿಷ ಇತರ ನೆಟ್‌ವರ್ಕ್‌ಗೆ ಕರೆ ಮಾಡಬಹುದು. ಆ ಬಳಿಕ ನಿಮಿಷಕ್ಕೆ 25 ಪೈಸೆ ದರ ಅನ್ವಯವಾಗಲಿದೆ. ಕಾಂಬೋ ಎಸ್‌ಟಿವಿ (ಸ್ಪೆಷಲ್‌ ಟಾರಿಫ್ ವೋಚರ್‌) ಅಡಿಯಲ್ಲಿ 339 ರೂ.ಗಳ ಪ್ಯಾಕ್‌ ಇರಲಿದ್ದು, 28 ದಿನಗಳ ವ್ಯಾಲಿಡಿಟಿ ಹೊಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next