Advertisement

ಅಡ್ಡ ಗೋಡೆ ಮೇಲೆ ಬಿಎಸ್‌ವೈ ದೀಪ

10:47 AM Dec 09, 2017 | Team Udayavani |

ಸೇಡಂ: ಇಲ್ಲಿನ ಮಾತೃಛಾಯಾ ಕಾಲೇಜು ಆವರಣದಲ್ಲಿ ಶುಕ್ರವಾರ ನಡೆದ ಬಿಜೆಪಿ ಪರಿವರ್ತನಾ ಯಾತ್ರೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸ ಬಯಸುವ ಆಕಾಂಕ್ಷಿಗಳ ನಿರಾಸೆಗೆ ಕಾರಣವಾಗಿದೆ. ಶತಾಯಗತಾಯ ಯಡಿಯೂರಪ್ಪ ಅವರಿಂದ ಅಭ್ಯರ್ಥಿ ಹೆಸರು ಘೋಷಣೆ ಮಾಡಿಸಿಯೇ ತೀರುವ ಮಾದರಿಯಲ್ಲಿ ನಡೆದ ಪ್ರಚಾರ, ಜನಬೆಂಬಲ ಪ್ರದರ್ಶನ ಮುಗ್ಗರಿಸಿದೆ.

Advertisement

ವಿಧಾನಸಭೆ ಚುನಾವಣೆಯ ದಿಕ್ಸೂಚಿ ಎಂದೇ ಕರೆಯಲಾಗಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ
ಕೈಗೊಂಡಿರುವ ಪರಿವರ್ತನಾ ಯಾತ್ರೆಯಲ್ಲಿ ಕೊನೆಗೂ ಅಭ್ಯರ್ಥಿ ಯಾರು ಎನ್ನುವ ಗುಟ್ಟನ್ನು ಬಿಟ್ಟುಕೊಡದ
ಯಡಿಯೂರಪ್ಪ ಸರ್ವೇ ಮಾಡಿ ಅಭ್ಯರ್ಥಿ ಆಯ್ಕೆ ಮಾಡುವ ಭರವಸೆ ನೀಡಿದ್ದಾರೆ.

ಸತತ ಮೂರು ಬಾರಿ ಸೋಲುಂಡ ರಾಜಕುಮಾರ ಪಾಟೀಲ ತೆಲ್ಕೂರ ಮತ್ತೆ ಕಣಕ್ಕಿಳಿಯಲು ಇಚ್ಚಿಸಿ, ತಮ್ಮ ಶಕ್ತಿ
ಪ್ರದರ್ಶಿಸಿದರೆ, ಇನ್ನುಳಿದ ಆಕಾಂಕ್ಷಿಗಳಾದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಶೇಖರ ನಿಲಂಗಿ, ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ರಾಜಗೋಪಾಲರೆಡ್ಡಿ ಸಹ ತಾವೇನೂ ಕಮ್ಮಿ ಇಲ್ಲ ಎಂಬಂತೆ ತಯಾರಿ ನಡೆಸಿದ್ದರು. ಆದರೆ ಮೊದಲಿಗೆ ಕೇಂದ್ರ ಸಚಿವ ಅನಂತಕುಮಾರ ಭಾಷಣ ಮಾಡುವಾಗ ರಾಜಕುಮಾರ ಪಾಟೀಲ ತೆಲ್ಕೂರ ಮತ್ತು ರಾಜಗೋಪಾಲರೆಡ್ಡಿ ಹೆಸರು ಉತ್ಛರಿಸಿ ಜನರ ಚಪ್ಪಾಳೆ ಗಿಟ್ಟಿಸಿಕೊಂಡರು.

ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು, ಸೇಡಂ ವಿಧಾನಸಭಾ ಕ್ಷೇತ್ರವನ್ನು ಕಾಂಗ್ರೇಸ್‌ ಮುಕ್ತ ಮಾಡಬೇಕು ಎನ್ನುವ ಮಾತುಗಳನ್ನಾಡಿದರು. ನಂತರ ಮಾತನಾಡಿದ ಯಡಿಯೂರಪ್ಪ ತಮ್ಮ ಇಡೀ
ಭಾಷಣವನ್ನು ತಾಳೆಹಾಕಿದರಲ್ಲದೆ, ಮೊದಲಿಗೆ ರಾಜಕುಮಾರ ಪಾಟೀಲ ತೆಲ್ಕೂರ, ನಂತರ ರಾಜಶೇಖರ ನಿಲಂಗಿ ಕೊನೆಯಲ್ಲಿ ರಾಜಗೋಪಾಲರೆಡ್ಡಿ ಹೆಸರು ಹೇಳಿ, ಭಾಷಣದ ಕೊನೆವರೆಗೂ ಅಭ್ಯರ್ಥಿ ಆಯ್ಕೆ ಕುರಿತು ಗುಟ್ಟು ಬಿಟ್ಟು ಕೊಡಲಿಲ್ಲ. ಸಮಾರಂಭ ಕೊನೆಗೊಳ್ಳುವ ವೇಳೆಯಲ್ಲಿ ಅನಂತಕುಮಾರ ಆಗಮಿಸಿ ಯಡಿಯೂರಪ್ಪ ಕಿವಿಯಲ್ಲಿ ಪಿಸುಗುಟ್ಟಿದ ನಂತರ ಸರ್ವೆ ಮಾಡಿ ಅಭ್ಯರ್ಥಿ ಆಯ್ಕೆ ಮಾಡುವ ಭರವಸೆ ನೀಡಿ ತಮ್ಮ ಭಾಷಣ ಮುಗಿಸಿದರು.
ಆಕಾಂಕ್ಷಿಗಳ ಪೈಕಿ ಅಭ್ಯರ್ಥಿಯನ್ನು ಯಡಿಯೂರಪ್ಪ ಆಯ್ಕೆ ಮಾಡುವರು ಎನ್ನುವ ಆಶಾಭಾವದಲ್ಲಿ ಕೂತಿದ್ದ ಸಾವಿರಾರು ಜನರ ಕಣೆರೆಪ್ಪೆಗಳು ಕೆಲಹೊತ್ತು ಸಪ್ಪಗಾದವು. 

ಕಾರ್ಯಕ್ರಮ ಪ್ರಾರಂಭವಾದಾಗಿನಿಂದ ಇದ್ದ ಹುರುಪು ಕೊನೆಯಲ್ಲಿ ಕಾಣಸಿಗಲಿಲ್ಲ. ಒಟ್ಟಾರೆಯಾಗಿ ಯಾರ ಮಡಿಲಿಗೆ
ಬಿಜೆಪಿ ಕಮಲ ಬೀಳಲಿದೆ ಎಂಬುದು ಗೌಪ್ಯವಾಗಿಯೇ ಉಳಿದಿದ್ದು, ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತಹ
ಪರಿಸ್ಥಿತಿ ನಿರ್ಮಾಣವಾಗಿ¨ 

Advertisement

ಬಿಜೆಪಿ ಪರಿವರ್ತನಾ ಯಾತ್ರೆ ಯಶಸ್ವಿ ವರದಿ ಪಿಎಂಗೆ ಸಲ್ಲಿಕೆ
ಕಲಬುರಗಿ: ನ.2 ರಿಂದ ರಾಜ್ಯದಾದ್ಯಂತ ಸಂಚರಿಸುತ್ತಿರುವ ರಾಜ್ಯ ಪರಿವರ್ತನಾ ಯಾತ್ರೆಯ ವರದಿಯನ್ನು ನ.15 ರಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲಿಸಲಾಗುವುದು ಎಂದು ಕೇಂದ್ರ ರಸಗೊಬ್ಬರ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ ತಿಳಿಸಿದರು. 

14 ಸಾವಿರ ಯುವಕರು ಸ್ವಯಂಪ್ರೇರಿತರಾಗಿ ಪರಿವರ್ತನಾ ಯಾತ್ರೆಗೆ ಬಂದಿರುವುದು ಒಂದು ಮಾದರಿ ಕಾರ್ಯವಾಗಿದೆ. ಇದನ್ನು ಪ್ರಧಾನಿಗಳ ಗಮನಕ್ಕೆ ತರಲಾಗುವುದು ಎಂದರು. ಸೇಡಂ ಪಟ್ಟಣದದಲ್ಲಿ ಶುಕ್ರವಾರ ಸಂಜೆ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯನ್ನುದ್ದೇಶಿಸಿ ಮಾತನಾಡಿ, ಕರ್ನಾಟಕದ 224 ಕ್ಷೇತ್ರದಾದ್ಯಂತ ಈ ಇಳಿ ವಯಸ್ಸಿನಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಯಾತ್ರೆ ಕೈಗೊಂಡಿರುವುದು ಐತಿಹಾಸಿಕ ವಿಷಯ. ಹಿಂದೆ ಯಾರೂ ಕೈಗೊಂಡಿರಲಿಲ್ಲ. ಯಾತ್ರೆ ಯಶಸ್ವಿಯಾಗಿರುವುದು, ರಾಜ್ಯ ಸರ್ಕಾರದ ಆಡಳಿತದಿಂದ ಜನ ಭ್ರಮನಿರಸನ ಆಗಿರುವುದನ್ನು ತೋರಿಸುತ್ತದೆ ಎಂದರು. 

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿಐ ಅಧ್ಯಕ್ಷ ಪರಮೇಶ್ವರ ಅವರು ನಾನೊಂದು ತೀರ, ಮನಸು, ಮನಸು ದೂರ ಎನ್ನುವಂತಾಗಿದ್ದಾರೆ. ರಾಜ್ಯದಲ್ಲಿ 3583 ರೈತರು ಆತ್ಮಹತ್ಯೆ ಮಾಡಿಕೊಂಡರೂ ನಿದ್ದೆಗಣ್ಣಿನಿಂದ ಹೊರಬರುತ್ತಿಲ್ಲ. ಇತ್ತಿಚೆಗೆ ನಾನೊಂದು ಕನಸು ಕಾಣುತ್ತಿದ್ದೇನೆ ಎಂದು ಜಾಹೀರಾತು ನೀಡಿದ್ದು, ಅದರಲ್ಲಿ ವಿನಯಕುಲಕರ್ಣಿ, ಯೋಗೇಶಗೌಡ, ಕೆ.ಜೆ. ಜಾರ್ಜ್‌, ಎಚ್‌.ವೈ. ಮೇಟಿ ಬರುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಸೇಡಂ ಕ್ಷೇತ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲರು ಎಲ್ಲಾ ಗುತ್ತಿಗೆಗಳನ್ನು ಒಬ್ಬರಿಗೆ ನೀಡಿ, ಪಾಲುದಾರಿಕೆ ದಂಧೆ ನಡೆಸುತ್ತಿದ್ದಾರೆ. ಕಾರ್ಖಾನೆಗೆ ಭೂಮಿ ನೀಡಿದ ರೈತರಿಗೆ ಪರಿಹಾರ ನೀಡಲು ಮುಂದಾಗುತ್ತಿಲ್ಲ. ಆದ್ದರಿಂದ ಬದಲಾವಣೆಗಾಗಿ , ಅಭಿವೃದ್ದಿಗಾಗಿ ಮುಂದಿನ ಬಾರಿ ಸೇಡಂನಲ್ಲಿ ಕಮಲವನ್ನು ಅರಳಿಸಿ ಎಂದು ಮನವಿ ಮಾಡಿದರು

ಜನಾಭಿಪ್ರಾಯ ಆಧರಿಸಿ ಸೇಡಂನಲ್ಲಿ ಟಿಕೆಟ್‌
ಜನಾಭಿಪ್ರಾಯ ಆಧರಿಸಿ ಸೇಡಂನಲ್ಲಿ ಬಿಜೆಪಿ ಅಭ್ಯರ್ಥಿಗೆ ಟಿಕೇಟ್‌ ನೀಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪ್ರಕಟಿಸಿದರು. ಪ್ರಧಾನ ಮಂತ್ರಿಗಳು ದೇಶದಲ್ಲಿ ಕಾಂಗ್ರೆಸ್‌ ಮುಕ್ತ ಭಾರತ
ಮಾಡಲು ಮುನ್ನುಗ್ಗುತ್ತಿರುವಂತೆ ಸೇಡಂ ಜನತೆ ಕಾಂಗ್ರೆಸ್‌ ಮುಕ್ತ ಕ್ಷೇತ್ರವಾಗಿಸಲು ಕರೆ ನೀಡಿದರು. ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆ ನಡೆಯುತ್ತಿದೆ. ಕಾರವಾರ ತಾಲೂಕಿನ ಹೊನ್ನಾವರದಲ್ಲಿ ಹಿಂದೂ ಕಾರ್ಯಕರ್ತನನ್ನು ಹತ್ಯೆ ಮಾಡಲಾಗಿದೆ. ಆದರೆ ಮುಖ್ಯಮಂತ್ರಿಗಳು ಆತನ ಶವದ ಮೇಲೆ ಅಭಿವೃದ್ಧಿ ಕಾರ್ಯಕ್ರಮಗಳ ಶಿಲಾನ್ಯಾಸ ನಡೆಸಿದ್ದಾರೆ ಎಂದು ಟೀಕಿಸಿದರು.

 ಪಕ್ಷದ ಮುಖಂಡರಾದ ಮಾಜಿ ಸಚಿವ ಅರವಿಂದ ಲಿಂಬಾವಳಿ, ರಾಜುಗೌಡ, ಪಕ್ಷದ ಪ್ರಧಾನ
ಕಾರ್ಯದರ್ಶಿ ಎನ್‌.ರವಿಕುಮಾರ ಮಾತನಾಡಿದರು. ಮಾಜಿ ಉಪಸಭಾಪತಿ ಚಂದ್ರಶೇಖರರೆಡ್ಡಿ ದೇಶಮುಖ
ಮದನಾ, ಮಾಜಿ ಶಾಸಕ ಬಸವಂತರೆಡ್ಡಿ ಮೋತಕಪಲ್ಲಿ, ಮಾಜಿ ಸಚಿವರಾದ ರೇವುನಾಯಕ ಬೆಳಮಗಿ, ಬಾಬುರಾವ
ಚವ್ಹಾಣ, ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ನಗರ ಜಿಲ್ಲಾಧ್ಯಕ್ಷರಾದ ಬಿ.ಜಿ.ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ
ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಮಾಜಿ ಜಿಲ್ಲಾಧ್ಯಕ್ಷ ರಾಜಕುಮಾರ ಪಾಟೀಲ ತೆಲ್ಕೂರ, ಟಿಕೇಟ್‌ ಆಕಾಂಕ್ಷಿಗಳಾದ ರಾಜಗೋಪಾಲರೆಡ್ಡಿ, ರಾಜು ನಿಲಂಗಿ ಹಾಗೂ ಇನ್ನಿತರರು ಹಾಜರಿದ್ದರು. ಕೇಂದ್ರ ಸಚಿವ ಅನಂತಕುಮಾರ ಹಾಗೂ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರನ್ನು ರಾಜಕುಮಾರ ಪಾಟೀಲ ತೆಲ್ಕೂರ ಸನ್ಮಾನಿಸಿದರು. ಶರಣಪ್ಪ ತಳವಾರ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next