ಬೀದರ್: ಪಂಜಾಬ್ ಗಡಿಯಲ್ಲಿ ಮಂಗಳವಾರ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಕಾರ್ಯಾಚರಣೆಯಲ್ಲಿ ಜಿಲ್ಲೆಯ ಬಿಎಸ್.ಎಫ್ ಯೋಧ ಹುತಾತ್ಮರಾಗಿದ್ದಾರೆ.
ಔರಾದ ತಾಲೂಕಿನ ಆಲೂರ(ಬಿ) ಗ್ರಾಮದ ಬಸವರಾಜ ಗಣಪತಿ (31) ಗುಂಡಿನ ಚಕಮಕಿಯಲ್ಲಿ ಅಸುನಿಗಿದ್ದಾರೆ. ಮಂಗಳವಾರ ಸಂಜೆ 6ರ ಸುಮಾರಿಗೆ ಸೇನಾಧಿಕಾರಿಗಳು ಬಸವರಾಜ ಅವರ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ದೇಶದಲ್ಲಿ 43.733 ಹೊಸ ಕೋವಿಡ್ ಪ್ರಕರಣಗಳು ಪತ್ತೆ: 47,240 ಮಂದಿ ಗುಣಮುಖ
2013ರಲ್ಲಿ ಭಾರತೀಯ ಸೇನೆಯಲ್ಲಿ ಸೇರಿದ್ದ ಬಸವರಾಜ ಇಂದೋರನಲ್ಲಿ ತರಬೇತಿಯನ್ನು ಪಡೆದು ನಂತರ ಕಲ್ಕತ್ತಾ ಮತ್ತು ತ್ರಿಪುರಾದಲ್ಲಿ ಸೇವೆ ಸಲ್ಲಿಸಿ ಕಳೆದ 20 ದಿನಗಳ ಹಿಂದೆಯಷ್ಟೇ ಪಂಜಾಬ್ ಗಡಿಗೆ ನಿಯುಕ್ತಿ ಗೊಂಡಿದ್ದರು. ಗ್ರಾಮಕ್ಕೆ ಮೃತ ದೇಹ ತರುವ ಬಗ್ಗೆ ಇನ್ನೂ ಸೇನೆಯಿಂದ ಯಾವುದೇ ಮಾಹಿತಿ ನೀಡಿಲ್ಲ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಹುತಾತ್ಮ ಯೋಧ ಬಸವರಾಜ ಐದು ವರ್ಷಗಳ ಹಿಂದೆ ಮಂಜುಳಾ ಅವರನ್ನು ಮದುವೆಯಾಗಿದ್ದು, ಮಕ್ಕಳಾಗಿರಲಿಲ್ಲ. ಅವರ ಇಬ್ಬರು ಸಹೋದರರು ಗ್ರಾಮದಲ್ಲಿ ಕೃಷಿಯನ್ನು ಮಾಡಿಕೊಂಡಿದ್ದಾರೆ.