Advertisement

ಸುರಂಗ ಮೂಲಕ ಉಗ್ರ ಲಗ್ಗೆ; 150 ಮೀ. ಟನೆಲ್‌ ಕೊರೆದಿದ್ದ ಉಗ್ರರು

01:13 AM Nov 23, 2020 | mahesh |

ಜಮ್ಮು/ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ನಗ್ರೋತಾದಲ್ಲಿ ನ.19ರಂದು ಸೇನೆಯಿಂದ ಕೊಲ್ಲಲ್ಪಟ್ಟ ಜೈಶ್‌-ಎ-ಮೊಹಮ್ಮದ್‌ ಸಂಘಟನೆಯ ನಾಲ್ವರು ಉಗ್ರರು ರಹಸ್ಯ ಸುರಂಗ ಮೂಲಕ ಒಳನುಸುಳಿದ್ದರು. ಬಿಎಸ್‌ಎಫ್ ಮತ್ತು ಇತರ ಅರೆಸೇನಾ ಪಡೆಗಳು ಸಾಂಬಾ ಜಿಲ್ಲೆಯ ರೀಗಲ್‌ ಗ್ರಾಮದಲ್ಲಿ ರವಿವಾರ 150 ಮೀಟರ್‌ ಉದ್ದದ ಸರಂಗವನ್ನು ಪತ್ತೆ ಹಚ್ಚುವ ಮೂಲಕ ಈ ಅಂಶ ದೃಢವಾಗಿದೆ. ಅಂತಾರಾಷ್ಟ್ರೀಯ ಗಡಿ ಸಮೀಪವೇ ರಹಸ್ಯ ಟನೆಲ್‌ ಅನ್ನು ಕೊರೆಯಲಾಗಿದೆ ಎಂದು ಡಿಜಿಪಿ ದಿಲಾºಗ್‌ ಸಿಂಗ್‌ ರವಿವಾರ ತಿಳಿಸಿದ್ದಾರೆ.

Advertisement

ಎನ್‌ಕೌಂಟರ್‌ ನಡೆದ ಸ್ಥಳದಿಂದ ಪೊಲೀಸರು ವೈರ್‌ಲೆಸ್‌ ಸೆಟ್‌ ಮತ್ತು ಗ್ಲೋಬಲ್‌ ಪೊಸಿಷನಿಂಗ್‌ ವ್ಯವಸ್ಥೆಗೆ ಸಂಬಂಧಿಸಿದ ಕೆಲವು ವಸ್ತು- ಮಾಹಿತಿಯನ್ನು ವಿಶ್ಲೇಷಣೆ ನಡೆಸಿದ ಬಳಿಕ ಉಗ್ರರು ಸುರಂಗ ಮಾರ್ಗದ ಮೂಲಕ ಒಳನುಸುಳಿರುವ ಸಾಧ್ಯತೆಯ ಬಗ್ಗೆ ಶಂಕೆ ವ್ಯಕ್ತವಾಯಿತು. ಹೀಗಾಗಿ, ಶನಿವಾರದಿಂದ ಎಲ್‌ಒಬಿ, ಗಡಿ ಸಮೀಪ ಶೋಧ ನಡೆಸಲಾಗುತ್ತಿತ್ತು. 26/11 ಘಟನೆ ನಡೆದು ಗುರುವಾರಕ್ಕೆ 12 ವರ್ಷಗಳು ಪೂರ್ತಿಗೊಳ್ಳಲಿವೆ. ಹೀಗಾಗಿ ಅದಕ್ಕಿಂತ ಭೀಕರ ದಾಳಿ ನಡೆಸಲು ಜೈಶ್‌ನ ನಾಲ್ವರು ಉಗ್ರರು ಸಿದ್ಧತೆ ನಡೆಸಿಕೊಂಡು ಬಂದಿದ್ದರು. ಅವರನ್ನು ಕೊಲ್ಲಲಾಗಿತ್ತು.

30 ಕಿಮೀ ನಡೆದಿದ್ದರು: ನಗ್ರೋತಾದಲ್ಲಿ ಅಸುನೀಗಿದ್ದ ನಾಲ್ವರು ಉಗ್ರರಿಗೆ ಕಮಾಂಡೋ ತರಬೇತಿ ಕೊಡಲಾಗಿತ್ತು. ಜತೆಗೆ ನ.19ರಂದು ರಾತ್ರಿ ನದಿಯಲ್ಲಿ 30 ಕಿಮೀ ನಡೆದು­ಕೊಂಡು ಬಂದಿದ್ದರು ಎಂದು ತನಿಖೆಯಲ್ಲಿ ಗೊತ್ತಾಗಿದೆ. 2016ರಲ್ಲಿ ಪಠಾಣ್‌ಕೋಟ್‌ ವಾಯು ನೆಲೆಯ ಮೇಲೆ ನಡೆದಿದ್ದ ದಾಳಿಯ ರೂವಾರಿ ಖಾಸಿಂ ಜಾನ್‌ ಎಂಬಾತನ ಜತೆಗೆ ನಿಕಟ ಸಂಪರ್ಕ ಹೊಂದಿದ್ದರು. ಉಗ್ರರ ಬಳಿಯಲ್ಲಿದ್ದ ವೈರ್‌ಲೆಸ್‌ ಸೆಟ್‌ ಮತ್ತು ಗ್ಲೋಬಲ್‌ ಪೊಸಿಷನಿಂಗ್‌ ಉಪಕರಣಗಳನ್ನು ವಶಪಡಿಸಿಕೊಂಡು ಅದರಲ್ಲಿದ್ದ ಮಾಹಿತಿ ವಿಶ್ಲೇಷಣೆ ನಡೆಸಿದಾಗ ಈ ಅಂಶ ದೃಢಪಟ್ಟಿದೆ.

ಪಾಕಿಸ್ಥಾನದ ಶಾಕಾರ್‌ಗಡದಲ್ಲಿರುವ ಜೈಶ್‌ ಕ್ಯಾಂಪ್‌ನಿಂದ ನದಿಯ ಮೂಲಕ ಸಾಂಬಾ ಗಡಿಯ ವರೆಗೆ 30 ಕಿಮೀ ದೂರವನ್ನು ಉಗ್ರರು ನಡೆದೇ ಕ್ರಮಿಸಿದ್ದರು.

ಉಗ್ರನ ಬಂಧನ: ಪುಲ್ವಾಮಾ ಜಿಲ್ಲೆಯ ಛಾಟು³ರ ಮೊಹಲ್ಲಾ ಎಂಬಲ್ಲಿ ಸೇನೆ ಉಗ್ರನೊಬ್ಬನನ್ನು ಬಂಧಿಸಿದೆ. ಉಗ್ರರ ಸಂಘಟನೆಗಳಿಗೆ ನೇಮಕ ಮಾಡುವ ವ್ಯಕ್ತಿ ಕುಪ್ವಾರಾ ಜಿಲ್ಲೆಗೆ ಆಗಮಿಸಿದ್ದಾನೆ ಎಂಬ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಶನಿವಾರ ತಡರಾತ್ರಿ ಶೋಧ ಕಾರ್ಯ ನಡೆಸಲಾಯಿತು. ಈ ಸಂದರ್ಭದಲ್ಲಿ ಉಗ್ರನೊಬ್ಬನನ್ನು ಬಂಧಿಸಲಾಗಿದೆ. ಆತನ ಗುರುತನ್ನು ಸೇನೆ ಬಹಿರಂಗಪಡಿಸಿಲ್ಲ.

Advertisement

ಪಾಕ್‌ನಿಂದ ಗುಂಡು ಹಾರಾಟ
ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಮತ್ತು ಅಂತಾರಾಷ್ಟ್ರೀಯ ಗಡಿ (ಐಬಿ)ಯಲ್ಲಿ ಪಾಕಿಸ್ಥಾನ ಸೇನೆ ಗ್ರಾಮಗಳನ್ನು ಮತ್ತು ಮುಂಚೂಣಿ ನೆಲೆಗಳನ್ನು ಗುರಿಯಾಗಿಸಿರಿಕೊಂಡು ಗುಂಡು ಹಾರಿಸಿದೆ. ಕಥುವಾ ಮತ್ತು ರಜೌರಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಗಡಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಭಾರತೀಯ ಪಡೆಗಳೂ ಕೂಡ ಪಾಕ್‌ ಪಡೆಗಳಿಗೆ ತಕ್ಕ ಪ್ರತ್ಯುತ್ತರ ನೀಡಿವೆ. ಮತ್ತೂಂದು ಪ್ರಕರಣದಲ್ಲಿ ಸತ್ಪಾಲ್‌, ಮನ್ಯಾರಿ, ಕರೋಲ್‌ ಕೃಷ್ಣ ಮತ್ತು ಗುರ್ನಾಮ್‌ ಗಡಿ ಪ್ರದೇಶಗಳಲ್ಲಿ ಶನಿವಾರ ರಾತ್ರಿ ಪಾಕ್‌ ಪಡೆಗಳು ಗುಂಡು ಹಾರಿಸಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಹಾಲಿ ವರ್ಷ 4 ಸಾವಿರಕ್ಕೂ ಅಧಿಕ ಬಾರಿ ಕದನ ವಿರಾಮ ಉಲ್ಲಂಘನೆ ನಡೆಸಿದೆ.

Advertisement

Udayavani is now on Telegram. Click here to join our channel and stay updated with the latest news.

Next