Advertisement

ಪಾಕ್ ಸೈನಿಕರ ಅಟ್ಟಹಾಸ; BSF ಯೋಧನ ಗಂಟಲು ಸೀಳಿ, ಕಣ್ಣು ಕಿತ್ತು ಹತ್ಯೆ

04:06 PM Sep 19, 2018 | Team Udayavani |

ಜಮ್ಮು/ನವದೆಹಲಿ: ಜಮ್ಮು ಸಮೀಪದ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕ್ ಪುಂಡಾಟಿಕೆಯನ್ನು ಮುಂದುವರಿಸಿದ್ದು, ಮಂಗಳವಾರ ಪಾಕಿಸ್ತಾನಿ ಸೇನೆ ಬಿಎಸ್ ಎಫ್ ಯೋಧನ ಗಂಟಲು ಸೀಳಿ, ಕಣ್ಣುಗಳನ್ನು ಕಿತ್ತು ಕ್ರೂರವಾಗಿ ಹತ್ಯೆಗೈದಿರುವ ಘಟನೆ ನಡೆದಿದೆ. ಇದರಿಂದ ಉಭಯ ದೇಶಗಳ ನಡುವಿನ ವಾತಾವರಣ ಮತ್ತಷ್ಟು ಹದಗೆಟ್ಟಂತಾಗಿದೆ.

Advertisement

ಜಮ್ಮು ಸಮೀಪದ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕ್ ಸೇನೆ ಬಿಎಸ್ ಎಫ್ ಯೋಧನ ಗಂಟಲನ್ನು ಸೀಳಿರುವುದಾಗಿ ಪಿಟಿಐ ವರದಿ ಮಾಡಿದೆ. ಈ ಕ್ರೂರ ಘಟನೆಯ ಬಳಿಕ ರಾಮ್ ಗಢ್ ಸೆಕ್ಟರ್ ನಲ್ಲಿ ಭದ್ರತಾ ಪಡೆಗಳು ಅಂತಾರಾಷ್ಟ್ರೀಯ ಗಡಿ ಹಾಗೂ ಗಡಿ ನಿಯಂತ್ರಣ ರೇಖೆ ಬಳಿ ಹೈ ಅಲರ್ಟ್ ಘೋಷಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಗಡಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ  ಯೋಧ ನರೇಂದ್ರ ಕುಮಾರ್ ಅವರನ್ನು ಶಸ್ತ್ರ ಸಹಿತ ಪಾಕ್ ಪಡೆಗಳು ಅಪಹರಿಸಿ ದೂರ ಕರೆದೊಯ್ದಿದ್ದರು. ಬಳಿಕ ಕ್ರೂರವಾಗಿ ಹಿಂಸಿಸಿ ಗಂಟಲು ಸೀಳಿ ಹತ್ಯೆಗೈದಿದ್ದರು. ಮಂಗಳವಾರ ಯೋಧನ ಶವ ದೊರೆತಿರುವುದಾಗಿ ಮಾಧ್ಯಮದ ವರದಿ ವಿವರಿಸಿದೆ. ಅಲ್ಲದೇ ಗಡಿ ಭದ್ರತಾ ಪಡೆ ಘಟನೆಯನ್ನು ಬಲವಾಗಿ ಖಂಡಿಸಿ ಪಾಕಿಸ್ತಾನಿ ರೇಂಜರ್ಸ್ ಗೆ ದೂರನ್ನು ಸಲ್ಲಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next