Advertisement
ದಿನದ ಆರಂಭದಲ್ಲಿ ಹೊಸ ಸ್ವರೂಪದ ಸೋಂಕಿನ ಹಿನ್ನೆಲೆಯಲ್ಲಿ ಷೇರು ಪೇಟೆ ವಹಿವಾಟು ಹೊಯ್ದಾಟದಲ್ಲಿಯೇ ಶುರುವಾ ಗಿತ್ತು. ಈ ಹಂತದಲ್ಲಿಯೇ 968 ಪಾಯಿಂಟ್ಸ್ ಗಳಷ್ಟು ಏರಿಳಿಕೆಯಾಗಿತ್ತು. ಹೊಸ ಮಾದ ರಿಯ ಸೋಂಕಿಗೆ ಫೈಜರ್ ಬಯಾನ್‌ಟೆಕ್ ಲಸಿಕೆ ಕಂಡುಹಿಡಿಯಲು ಸಾಧ್ಯ ಎಂದು ಘೋಷಣೆ ಮಾಡಿದ್ದು ಐರೋಪ್ಯ ಮಾರುಕಟ್ಟೆ ಯಲ್ಲಿ ಸೂಚ್ಯಂಕ ಚೇತರಿಕೆಗೆ ಕಾರಣವಾ ಯಿತು. ಅದು ಬಾಂಬೆ ಷೇರು ಪೇಟೆಯಲ್ಲೂ ಆಸೆಯ ಹೊಂಗಿರಣ ಮೂಡಿ ಸಿತು. ಹೀಗಾಗಿ, ಕೊನೆಯ ಹಂತದಲ್ಲಿ ಷೇರು ಖರೀದಿ ಬಿರುಸಾಯಿತು. ಅದರ ಲಾಭ ಪಡೆದದ್ದು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಷೇರುಗಳು. ದಿನದ ಅಂತ್ಯಕ್ಕೆ 452.73 ಪಾಯಿಂಟ್ಸ್‌ಗಳಷ್ಟು ಜಿಗಿದು, ಕಳೆದ ವಾರ ಕಾಯ್ದುಕೊಂಡಿದ್ದ 46 ಸಾವಿರದ ಮಟ್ಟಕ್ಕೆ ಏರಿಕೆ ಕಂಡಿತು. ದಿನಾಂತ್ಯಕ್ಕೆ 46,006.69ರಲ್ಲಿ ಮುಕ್ತಾ ಯವಾ ಯಿತು. ಎಚ್‌ಸಿಎಲ್ ಟೆಕ್ ಶೇ.5.09ರಷ್ಟು ಹೆಚ್ಚು ಬಿಕರಿಯಾಗಿದೆ.
ಹೊಸ ಸ್ವರೂಪದ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಕಚ್ಚಾ ತೈಲ ಬೆಲೆ ಶೇ.1.9ರಷ್ಟು ಕುಸಿದಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆ 88 ಸೆಂಟ್ಸ್ ಕುಸಿದು, ಪ್ರತಿ ಬ್ಯಾರೆಲ್‌ಗೆ 50.03 ಡಾಲರ್‌ಗೆ ತಲುಪಿತು. ವೆಸ್ಟ್ ಟೆಕ್ಸಸ್ ಇಂಟರ್‌ಮೀಡಿಯೆಟ್ 92 ಸೆಂಟ್ಸ್ ನಷ್ಟು ಇಳಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 47.05 ಡಾಲರ್ ಆಗಿತ್ತು.
Related Articles
ಹೊಸ ಸ್ವರೂಪದ ಸೋಂಕಿಗೆ ಲಸಿಕೆ ಸಿದ್ಧ ಎಂದು ಫೈಜರ್ ನೀಡಿದ ಹೇಳಿಕೆ.
ಔಷಧೋದ್ಯಮ ಸೇರಿದಂತೆ ಹಲವು ಕಂಪೆನಿಗಳ ಷೇರುಗಳಿಗೆ ಹೆಚ್ಚಿದ ಬೇಡಿಕೆ.
ಅಮೆರಿಕದಲ್ಲಿ ಕೊರೊನಾ ಪರಿಹಾರ ಪ್ಯಾಕೇಜ್‌ಗೆ ಸಿಕ್ಕಿದ ಅಂಗೀಕಾರ.
Advertisement
ಬಿಎಸ್‌ಇ46,006.69- ದಿನಾಂತ್ಯಕ್ಕೆ
452.73- ಏರಿಕೆಯಾದದ್ದು
968 ಪಾಯಿಂಟ್ಸ್-ದಿನದಲ್ಲಿ ಏರಿಳಿಕೆ
ನಿಫ್ಟಿ
13, 466.30- ದಿನಾಂತ್ಯಕ್ಕೆ
137.90- ಏರಿಕೆಯಾದದ್ದು ರೂಪಾಯಿ ಕುಸಿತ
5 ಪೈಸೆ- ದಿನದ ಇಳಿಕೆ
73.82 ರೂ.-ಮಧ್ಯಾಂತರ ವೇಳೆಗೆ ಏರಿಕೆ
73.84 ರೂ.- ದಿನಾಂತ್ಯಕ್ಕೆ