Advertisement

ಮುಂಬಯಿ ಶೇರು ದಿನಾಂತ್ಯಕ್ಕೆ ಬರಿಗೈ; 0.77 ಅಂಕ ಏರಿಕೆ

04:57 PM Sep 07, 2017 | |

ಮುಂಬಯಿ : ದಿನದ ಆರಂಭಿಕ ವಹಿವಾಟಿನಲ್ಲಿ ಗಳಿಸಿದ 150 ಅಂಕಗಳ ಮುನ್ನಡೆಯನ್ನು ದಿನಾಂತ್ಯದ ವೇಳೆಗೆ ಕಳೆದುಕೊಂಡ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಇಂದು ಗುರುವಾರದ ವಹಿವಾಟನ್ನು 0.77 ಅಂಕಗಳ ಅತ್ಯಲ್ಪ ಏರಿಕೆಯೊಂದಿಗೆ 31,662.74 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು. 

Advertisement

ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 13.70 ಅಂಕಗಳ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 9,929.90 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. 

ಇಂದಿನ ವಹಿವಾಟಿನ ಟಾಪ್‌ ಗೇನರ್‌ಗಳು : ವೇದಾಂತ, ಈಶರ್‌ ಮೋಟರ್‌, ಬಾಶ್‌, ಮಹೀಂದ್ರ, ಹಿಂಡಾಲ್ಕೊ. ಟಾಪ್‌ ಲೂಸರ್‌ಗಳು : ಬಿಪಿಸಿಎಲ್‌, ಐಟಿಸಿ, ಟಾಟಾ ಮೋಟರ್‌ (ಡಿ), ಐಡಿಯಾ ಸೆಲ್ಯುಲರ್‌, ಭಾರ್ತಿ ಏರ್‌ಟೆಲ್‌.

ಇಂದು ಒಟ್ಟು 2,907 ಶೇರುಗಳು ವ್ಯವಹಾರಕ್ಕೆ ಒಳಪಟ್ಟವು; 1,484 ಶೇರುಗಳು ಮುನ್ನಡೆ ಕಂಡವು; 1,243 ಶೇರುಗಳ ಹಿನ್ನಡೆಗೆ ಗುರಿಯಾದವು; 180 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next