ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ ಅಚ್ಚರಿ ಎಂಬಂತೆ 200ಕ್ಕೂ ಅಧಿಕ ಅಂಕಗಳ ಏರಿಕೆಯನ್ನು ದಾಖಲಿಸಿತು.
ದೇಶೀಯ ಹೂಡಿಕೆ ಸಂಸ್ಥೆಗಳು ಆಟೋ, ಮೆಟಲ್ ಮತ್ತು ಬ್ಯಾಂಕಿಂಗ್ ರಂಗದಲ್ಲಿ ವ್ಯಾಪಕ ಶೇರು ಖರೀದಿಸಿದ್ದೇ ಸೆನ್ಸೆಕ್ಸ್‌ನ ಈ ಪರಿಯ ಏರಿಕೆಗೆ ಕಾರಣವಾಯಿತು. ನಿನ್ನೆ ಮಂಗಳವಾರ ಸೆನ್ಸೆಕ್ಸ್ 175 ಅಂಕಗಳ ನಷ್ಟಕ್ಕೆ ಗುರಿಯಾಗತ್ತು.
ಇಂದು ಬೆಳಗ್ಗೆ 10.50ಕ್ಕೆ ಸೆನ್ಸೆಕ್ಸ್ ತನ್ನ ಏರಿಕೆಯನ್ನು ಭರ್ಜರಿಯಾಗಿ ಮುಂದುವರಿಸಿ 379.43 ಅಂಕಗಳ ಜಿಗಿತದೊಂದಿಗೆ 34,678.90 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 125.50 ಅಂಕಗಳ ಏರಿಕೆಯೊಂದಿಗೆ 10,426.50 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಬಜಾಜ್ ಫಿನಾನ್ಸ್, ಎಸ್ ಬ್ಯಾಂಕ್, ರಿಲಯನ್ಸ್ ಮಾರುತಿ ಸುಜುಕಿ, ಟಾಟಾ ಮೋಟರ್ ಶೇರುಗಳು ಇಂದು ಬೆಳಗ್ಗಿನ ವಹಿವಾಟಿನಲ್ಲಿ ಅತ್ಯಂತ ಕ್ರಿಯಾಶೀಲವಾಗಿದ್ದವು.
ಇಂದು ಬೆಳಗ್ಗಿನ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ 23 ಪೈಸೆಗಳ ಚೇತರಿಕೆಯನ್ನು ಕಂಡು 74.16 ರೂ. ಮಟ್ಟಕ್ಕೆ ತಲುಪಿದ್ದುದು ಕೂಡ ಮುಂಬಯಿ ಶೇರು ಮಾರುಕಟ್ಟೆಯಲ್ಲಿನ ತೇಜಿಗೆ ಕಾರಣವಾಗಿತ್ತು.