ಮುಂಬಯಿ : ಐಟಿ, ಬ್ಯಾಂಕಿಂಗ್, ಇಂಧನ ಮುಂತಾದ ಮುಂಚೂಣಿ ರಂಗಗಳ ಶೇರುಗಳ ಖರೀದಿಯಲ್ಲಿ ಹೂಡಿಕೆದಾರರು ಮತ್ತು ವಹಿವಾಟುದಾರರು ತೋರಿದ ಆಸಕ್ತಿಯ ಪರಿಣಾಮವಾಗಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಇಂದು ಶುಕ್ರವಾರ ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ 187 ಅಂಕಗಳ ಮುನ್ನಡೆಯನ್ನು ಸಾಧಿಸಿತು.
ಉತ್ತರ ಕೊರಿಯ ನಾಯಕ ಜಿಮ್ ಜಾಂಗ್ ಉನ್ ಅವರೊಂದಿಗೆ ಪ್ರಸ್ತಾವಿತ ಭೇಟಿಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರದ್ದು ಪಡಿಸಿದ ಹಿನ್ನೆಲೆಯಲ್ಲಿ ಏಶ್ಯನ್ ಶೇರುಪೇಟೆಗಳಲ್ಲಿ ಇಂದು ಮಿಶ್ರ ಪ್ರತಿಕಿಯೆ ತೋರಿ ಬಂದಿತ್ತು. ನಿನ್ನೆ ಗುರುವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 318.20 ಅಂಕಗಳ ಏರಿಕೆಯನ್ನು ದಾಖಲಿಸಿತ್ತು.
ಇಂದು ಶುಕ್ರವಾರ ಬೆಳಗ್ಗೆ ಸೆನ್ಸೆಕ್ಸ್ 181.84 ಅಂಕಗಳ ಮುನ್ನಡೆಯೊಂದಿಗೆ 34,844.95 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 53.70 ಅಂಕಗಳ ಮುನ್ನಡೆಯೊಂದಿಗೆ 10,567.60 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿತ್ತು.
ಬೆಳಗ್ಗಿನ ವಹಿವಾಟಿನಲ್ಲಿ ಇಂದು ಟಿಸಿಎಸ್, ಟಾಟಾ ಮೋಟರ್, ವೇದಾಂತ, ಇನ್‌ಫೋಸಿಸ್, ಟಾಟಾ ಸ್ಟೀಲ್ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ಐಡಿಯಾ ಸೆಲ್ಯುಲರ್, ಬಜಾಜ್ ಫಿನ್‌ಸರ್ವ್, ಹಿಂಡಾಲ್ಕೋ, ಟಾಟಾಸ್ಟೀಲ್, ಬಜಾಜ್ ಫಿನಾನ್ಸ್; ಟಾಪ್ ಲೂಸರ್‌ಗಳು : ವೇದಾಂತ, ಭಾರ್ತಿ ಇನ್‌ಫ್ರಾಟೆಲ್, ಕೋಲ್ ಇಂಡಿಯಾ, ಎಸ್‌ಬಿಐ, ಗ್ರಾಸಿಂ.
ಡಾಲರ್ ಎದುರು ಇಂದು ರೂಪಾಯಿ 14 ಪೈಸೆಯಷ್ಟು ಚೇತರಿಕೆ ಕಂಡು 68.20 ರೂ. ಮಟ್ಟಕ್ಕೆ ಏರಿರುವುದು ಶೇರು ಪೇಟೆಗೆ ಸಮಾಧಾನ ತಂದಿತು.