ಮುಂಬಯಿ : ಮುಂಬಯಿ ಶೇರು ಮಾರುಕಟ್ಟೆ ನಿನ್ನೆ ಗುರುವಾರದ ಅದ್ಭುತ ರಾಲಿಯನ್ನು ಶುಕ್ರವಾರ ಕೂಡ ಮುಂದುವರಿಸಿದೆ. ಇಂದಿನ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ ಸೂಚ್ಯ,ಕ 113.08 ಅಂಕಗಳ ಮುನ್ನಡೆಯನ್ನು ದಾಖಲಿಸಿ 32,295.30 ಅಂಕಗಳ ಮಟ್ಟಕ್ಕೆ ಏರಿತು. ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ 31.40 ಅಂಕಗಳ ಏರಿಕೆಯನ್ನು ದಾಖಲಿಸಿ 10,127.80 ಅಂಕಗಳ ಮಟ್ಟಕ್ಕೆ ಏರಿತು.
ಬೆಳಗ್ಗೆ 10.20ರ ಹೊತ್ತಿಗೆ ಸೆನ್ಸೆಕ್ಸ್ 178.44 ಅಂಕಗಳ ಮುನ್ನಡೆಯೊಂದಿಗೆ 32,360.66 ಅಂಕಗಳ ಮಟ್ಟದಲ್ಲೂ, ನಿಫ್ಟಿ 51.80 ಅಂಕಗಳ ಮುನ್ನಡೆಯೊಂದಿಗೆ 10,148.20 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ನಿನ್ನೆ ಶುಕ್ರವಾರದ ವಹಿವಾಟನ್ನು ಮುಂಬಯಿ ಶೇರು ಪೇಟೆ 348 ಅಂಕಗಳ ಭರ್ಜರಿ ಏರಿಕೆಯೊಂದಿಗೆ ಕೊನೆಗೊಳಿಸಿತ್ತು.
ಆರಂಭಿಕ ವಹಿವಾಟಿನಲ್ಲಿ ಭಾರ್ತಿ ಏರ್‌ಟೆಲ್, ರಿಲಯನ್ಸ್, ಟಿಸಿಎಸ್, ಭಾರ್ತಿ ಇನ್‌ಫ್ರಾಟೆಲ್, ಟಾಟಾ ಸ್ಟೀಲ್ ಶೇರುಗಳು ಅತೀ ಹೆಚ್ಚು ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳಾಗಿ ಭಾರ್ತಿ ಏರ್‌ಟೆಲ್, ಐಡಿಯಾ ಸೆಲ್ಯುಲರ್, ಭಾರ್ತಿ ಇನ್‌ಫ್ರಾಟೆಲ್, ಟಾಟಾ ಸ್ಟೀಲ್, ಟಿಸಿಎಸ್ ಶೇರುಗಳು ವಿಜೃಂಭಿಸಿದವು.
ಟಾಪ್ ಲೂಸರ್‌ಗಳಾಗಿ ಗೇಲ್, ಎನ್‌ಟಿಪಿಸಿ, ಬಿಪಿಸಿಎಲ್, ಡಾ. ರೆಡ್ಡಿ ಮತ್ತು ಐಟಿಸಿ ಶೇರುಗಳು ಕಾಣಿಸಿಕೊಂಡವು.
ಡಾಲರ್ ಎದುರು ರೂಪಾಯಿ ವಿನಿಮಯ ದರ ಇಂದಿನ ಆರಂಭಿಕ ವಹಿವಾಟಿನಲ್ಲಿ 13 ಪೈಸೆಯಷ್ಟು ಸುಧಾರಿಸಿ 65.08 ರೂ. ಮಟ್ಟಕ್ಕೆ ತಲಪಿರುವುದು ಮುಂಬಯಿ ಶೇರು ಪೇಟೆಗೆ ಹೊಸ ಉತ್ತೇಜನವನ್ನು ತುಂಬಿತು.