ಮುಂಬಯಿ : ಹೂಡಿಕೆದಾರರು ಮತ್ತು ವಹಿವಾಟುದಾರರು ಲಾಭ ನಗದೀಕರಣಕ್ಕೆ ಮುಂದಾದ ಕಾರಣ ತೀವ್ರ ಮಾರಾಟ ಒತ್ತಡಕ್ಕೆ ಗುರಿಯಾದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ವಹಿವಾಟನ್ನು 205.72 ಅಂಕಗಳ ನಷ್ಟದೊಂದಿಗೆ 30,365.25 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ವೇಳೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 52.10 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 9,386.15 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದಿನ ವಹಿವಾಟಿನಲ್ಲಿ ಐಸಿಐಸಿಐ ಬ್ಯಾಂಕ್, ಸನ್ ಫಾರ್ಮಾ,ಮಾರುತಿ ಸುಜುಕಿ, ಐಟಿಸಿ, ಎಸ್‌ಬಿಐ ಅತೀ ಹೆಚ್ಚು ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ಮಾರುತಿ ಸುಜುಕಿ, ಮಹೀಂದ್ರ, ಈಶರ್ ಮೋಟರ್, ವಿಪ್ರೋ, ಹಿಂಡಾಲ್ಕೊ.
ಟಾಪ್ ಲೂಸರ್‌ಗಳು : ಅದಾನಿ ಪೋರ್ಟ್, ಅರಬಿಂದೋ ಫಾರ್ಮಾ, ಸಿಪ್ಲಾ, ಸನ್ ಫಾರ್ಮಾ, ಐಡಿಯಾ ಸೆಲ್ಯುಲರ್.