ಮುಂಬಯಿ : ಉತ್ತರ ಕೊರಿಯದ ಪರಮಾಣು ಉದ್ಧಟತನಕ್ಕೆ ಅಮೆರಿಕ ಹಾಗೂ ಏಶ್ಯನ್ ಶೇರು ಮಾರುಕಟ್ಟೆಗಳು ಬೆದರಿರುವುದನ್ನು ಅನುಸರಿಸಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ 223 ಅಂಕಗಳ ಕುಸಿತಕ್ಕೆ ಗುರಿಯಾಯಿತು. ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 9,900 ಅಂಕಗಳಿಗಿಂತ ಕೆಳಮಟ್ಟಕ್ಕೆ ಇಳಿಯಿತು.
ಡಾಲರ್ ಎದುರು ರೂಪಾಯಿ ವಿನಿಮಯ ದರ 12 ಪೈಸೆಗಳಷ್ಟು ಕುಸಿದದ್ದು ಕೂಡ ಶೇರು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿತು.
ಬೆಳಗ್ಗೆ 10.45 ರ ಹೊತ್ತಿಗೆ ಸೆನ್ಸೆಕ್ಸ್ 191.70 ಅಂಕಗಳ ನಷ್ಟದೊಂದಿಗೆ 31,617.85 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 55.40 ಅಂಕಗಳ ನಷ್ಟದೊಂದಿಗೆ 9,896.80 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ರಿಲಯನ್ಸ್, ಇನ್‌ಫೋಸಿಸ್, ಸನ್ ಫಾರ್ಮಾ, ಐಟಿಸಿ, ಟಾಟಾ ಮೋಟರ್ ಶೇರುಗಳು ಅತೀ ಹೆಚ್ಚು ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ಗೇಲ್, ರಿಲಯನ್ಸ್, ಅಲ್‌ಟ್ರಾ ಟೆಕ್ ಸಿಮೆಂಟ್, ಕೋಟಕ್ ಮಹೀಂದ್ರ, ಇಂಡಸ್‌ಇಂಡ್ ಬ್ಯಾಂಕ್.
ಟಾಪ್ ಲೂಸರ್‌ಗಳು : ಸನ್ ಫಾರ್ಮಾ, ಐಟಿಸಿ, ಐಡಿಯಾ ಸೆಲ್ಯುಲರ್, ಲೂಪಿನ್, ಎಕ್ಸಿಸ್ ಬ್ಯಾಂಕ್.