ಮುಂಬಯಿ : ನಿರಂತರ ಐದನೇ ದಿನವಾಗಿ ಇಂದು ಶುಕ್ರವಾರ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ 269 ಅಂಕಗಳ ಉತ್ತಮ ಏರಿಕೆಯನ್ನು ದಾಖಲಿಸಿ, 38,000 ಅಂಕಗಳ ಮಟ್ಟವನ್ನು ಮತ್ತೆ ಸಂಪಾದಿಸುವಲ್ಲಿ ಯಶಸ್ವಿಯಾಯಿತು.
ಇಂದು ಮಧ್ಯಾಹ್ನ ಸೆನ್ಸೆಕ್ಸ್ 500 ಅಂಕಗಳ ಭರ್ಜರಿ ಮುನ್ನಡೆ ಸಾಧಿಸಿತ್ತು. ಆದರೆ ದಿನದ ಅಂತ್ಯಕ್ಕೆ ಅದು 269. 43 ಅಂಕಗಳಿಗೆ ಇಳಿದು 38,024.32 ಅಂಕಗಳ ಮಟ್ಟದಲ್ಲಿ ನೆಲೆಗೊಂಡಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 83.60 ಅಂಕಗಳ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 11,426.85 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಡಾಲರ್ ಎದುರು ರೂಪಾಯಿ ಇಂದು 5 ಪೈಸೆಯ ಏರಿಕೆಯನ್ನು ದಾಖಲಿಸಿ 69.09 ರೂ. ಮಟ್ಟಕ್ಕೇರಿತು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,860 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1, 205 ಶೇರುಗಳು ಮುನ್ನಡೆ ಸಾಧಿಸಿದವು; 1,478 ಶೇರುಗಳು ಹಿನ್ನಡೆಗೆ ಗುರಿಯಾದವು; 177 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.