Advertisement

ನಿರಂತರ 3ನೇ ದಿನವೂ ಗೆಲುವಿನ ಓಟ: ಸೆನ್ಸೆಕ್ಸ್‌ 204 ಅಂಕ ಜಂಪ್‌

05:10 PM Nov 28, 2018 | udayavani editorial |

ಮುಂಬಯಿ : ನಿರಂತರ ಮೂರನೇ ದಿನದ ಏರು ಗತಿಯ ಓಟದಲ್ಲಿ ತೊಡಗಿರುವ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಬುಧವಾರದ ವಹಿವಾಟನ್ನು 203.81 ಅಂಕಗಳ ಜಿಗಿತದೊಂದಿಗೆ 35,716.95 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

Advertisement

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 43.25 ಅಂಕಗಳ ಏರಿಕೆಯೊಂದಿಗೆ ದಿನದ ವಹಿವಾಟನ್ನು 10,728.85 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

ತಿಂಗಳ ಕೊನೇ ಗುರುವಾರವಾಗಿರುವ ನಾಳೆ ನವೆಂಬರ್‌ ತಿಂಗಳ ವಾಯಿದೆ ವಹಿವಾಟು ಚುಕ್ತಾ ಆಗಲಿರುವ ಕಾರಣ ಇಂದು ವಹಿವಾಟುದಾರರ ವ್ಯಾಪಕ ಶಾರ್ಟ್‌ ಕವರಿಂಗ್‌ ನಲ್ಲಿ ತೊಡಗಿಕೊಂಡದ್ದೇ ಮುಂಬಯಿ ಶೇರು ಪೇಟೆಯ ಜಿಗಿತಕ್ಕೆ ಕಾರಣವಾಯಿತು. ಮೇಲಾಗಿ ಜಾಗತಿಕ ಶೇರು ಮಾರುಕಟ್ಟೆಗಳಲ್ಲಿನ ಧನಾತ್ಮಕತೆ ಮತ್ತು ಅಮೆರಿಕ-ಚೀನ ವಾಣಿಜ್ಯ ಬಿಕ್ಕಟ್ಟು ತಾರ್ಕಿಕ ಅಂತ್ಯ ಕಾಣುವುದೆಂಬ ಆಶಾ ಭಾವನೆ ಕೂಡ ಇದಕ್ಕೆ ಪೂರಕವಾಯಿತು. 

ಮುಂಬಯಿ ಶೇರು ಪೇಟೆಯಲ್ಲಿ ಇಂದು ಒಟ್ಟು   2,770 ಕಂಪೆನಿಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 972 ಕಂಪೆನಿಗಳು ಮುನ್ನಡೆ ಸಾಧಿಸಿದವು;  1,639 ಕಂಪೆನಿಗಳು ಹಿನ್ನಡೆಗೆ ಗುರಿಯಾದವು;  159 ಕಂಪೆನಿಗಳ ಶೇರು ಧಾರಣೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬರಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next