ಮುಂಬಯಿ : ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ಇಂದು ಬುಧವಾರ ಸ್ಥಿರತೆಯ ಪ್ರವೃತ್ತಿ ತೋರಿ ಬಂದ ಹೊರತಾಗಿಯೂ ಸದ್ಯದಲ್ಲೇ ಅನಾವರಣಗೊಳ್ಳಲಿರುವ ಮೂರನೇ ತ್ತೈಮಾಸಿಕ ಕಾರ್ಪೊರೇಟ್ ಫಲಿತಾಂಶದ ಬಗ್ಗೆ ಹೂಡಿಕೆದಾರು ಮತ್ತು ವಹಿವಾಟುದಾರರು ಎಚ್ಚರಿಕೆಯ ನಡೆ ತೋರಿದ ಕಾರಣ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಕೊನೇ ಕ್ಷಣದ ಏರಿಳಿತಕ್ಕೆ ಗುರಿಯಾಗಿ ದಿನದ ವಹಿವಾಟನ್ನು 19 ಅಂಕಗಳ ನಷ್ಟದೊಂದಿಗೆ 33,793.38 ಅಂಕಗಳ ಮಟ್ಟದಲ್ಲಿ ಸಮಾಪನಗೊಳಿಸಿತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಒಂದು ಅಂಕದ ಮುನ್ನಡೆಯನ್ನು ಕಾಯ್ದುಕೊಂಡು ದಿನದ ವಹಿವಾಟನ್ನು 10,443.20 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಸೆನ್ಸೆಕ್ಸ್ ಕಳೆದ ಎರಡು ದಿನಗಳ ವಹಿವಾಟಿನಲ್ಲಿ ಒಟ್ಟು 244.57 ಅಂಕಗಳ ನಷ್ಟಕ್ಕೆ ಗುರಿಯಾಗಿತ್ತು.
ಮುಂಬಯಿ ಶೇರು ಪೇಟಯಲ್ಲಿಂದು ಒಟ್ಟು 3,003 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; 1,911 ಶೇರುಗಳು ಮುನ್ನಡೆ ಕಂಡವು; 973 ಶೇರುಗಳು ಹಿನ್ನಡೆಗೆ ಗುರಿಯಾದವು; 119 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.
ಇಂದಿನ ಟಾಪ್ ಗೇನರ್‌ಗಳು : ಅದಾನಿ ಪೋರ್ಟ್, ಲಾರ್ಸನ್, ಐಡಿಯಾ ಸೆಲ್ಯುಲರ್, ಐಸಿಐಸಿ ಬ್ಯಾಂಕ್, ಹಿಂಡಾಲ್ಕೊ.
ಟಾಪ್ ಲೂಸರ್‌ಗಳು : ಡಾ. ರೆಡ್ಡಿ, ವಿಪ್ರೋ, ಒಎನ್‌ಜಿಸಿ, ಬಜಾಜ್ ಆಟೋ, ಮಾರುತಿ ಸುಜುಕಿ.