ಮುಂಬಯಿ : ನಿರಂತರ ಆರನೇ ದಿನ ತನ್ನ ಏರು ಗತಿಯನ್ನು ಮುಂದುವರಿಸಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ವಹಿವಾಟನ್ನು 160.69 ಅಂಕಗಳ ಏರಿಕೆಯೊಂದಿಗೆ 34,101.13 ಅಂಕಗಳ ಮಟ್ಟದಲ್ಲಿ ಆಶಾದಾಯಕವಾಗಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 41.50 ಷಂಕಗಳ ಏರಿಕೆಯೊಂದಿಗೆ ದಿನದ ವಹಿವಾಟನ್ನು 10,458.65 ಅಂಕಗಳ ಮಟ್ಟಕ್ಕೇರಿ ಕೊನೆಗೊಳಿಸಿತು.
ಕಳೆದ ಐದು ದಿನಗಳ ನಿರಂತರ ಗೆಲುವಿನ ಹಾದಿಯಲ್ಲಿ ಸೆನ್ಸೆಕ್ಸ್ ಒಟ್ಟು 921.37 ಅಂಕಗಳನ್ನು ಸಂಪಾದಿಸಿದ್ದು ಇಂದು ಕೊನೆಗೊಂಡ ವಹಿವಾಟು ಮಟ್ಟವು ಕಳೆದ ಫೆಬ್ರವರಿಯಲ್ಲಿ ದಾಖಲಾದ ಮಟ್ಟದ ಬಳಿಕದ ಅತೀ ದೊಡ್ಡ ಮಟ್ಟ ಎನಿಸಿಕೊಂಡಿದೆ.
ಇಂದಿನ ವಹಿವಾಟಿನಲ್ಲಿ ಟಿಸಿಎಸ್, ಇನ್‌ಫೋಸಿಸ್, ವಿಪ್ರೋ, ಎಚ್‌ಸಿಎಲ್ ಟೆಕ್, ಟೆಕ್ ಮಹೀಂದ್ರ ಶàರುಗಳು ಉತ್ತಮ ಮುನ್ನಡೆ ಕಂಡವು. ಡಾಲರ್ ಎದುರು ರೂಪಾಯಿ ಐದು ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದ ಪ್ರಯುಕ್ತ ಡಾಲರ್ ಬಲದಲ್ಲಿ ಟೆಕ್ ಶೇರುಗಳ ಧಾರಣೆ ಗಮನಾರ್ಹವಾಗಿ ಏರಿತು.
ಹಾಗಿದ್ದರೂ ಇಂದು ರಿಯಲ್ಟಿ, ಮೆಟಲ್, ಹೆಲ್ತ್ ಕೇರ್, ಪವರ್ ಮತ್ತು ಪಿಎಸ್‌ಯು ಕೌಂಟರ್ ಗಳಲ್ಲಿ ಶೇರುಗಳು ಮಾರಾಟದ ಒತ್ತಡವನ್ನು ಕಂಡವು. ಲಾಭ ನಗದೀಕರಣವೇ ಇದಕ್ಕೆ ಕಾರಣವಾಯಿತು.
ವಿದೇಶಿ ಹೂಡಿಕೆದಾರರು ನಿನ್ನೆ ಗುರುವಾರದ ವಹಿವಾಟಿನಲ್ಲಿ 362.30 ಕೋಟಿ ರೂ.ಗಳ ಶೇರುಗಳನ್ನು ಖರೀದಿಸಿದರು. ಇದೇ ರೀತಿ ದೇಶೀಯ ಸಾಂಸ್ಥಿಕ ಹೂಡಿಕೆದಾರರು 111.82 ಕೋಟಿ ರೂ. ಶೇರುಗಳನ್ನು ಖರೀದಿಸಿದರು.
ಭಾರತದ ಆರ್ಥಿಕತೆ (ಜಿಡಿಪಿ) 2017ರಲ್ಲಿ ದಾಖಲಿಸಿದ್ದ ಶೇ.6.2ರ ಬೆಳವಣಿಗೆಗೆ ಹೋಲಿಸಿದಲ್ಲಿ 2018ರಲ್ಲಿ ಅದು ಶೇ.7.6ರ ಮಟ್ಟಕ್ಕೆ ಬೆಳೆಯುವುದೆಂಬ ನಿರೀಕ್ಷೆಯನ್ನು ಮೂಡಿ ವ್ಯಕ್ತಪಡಿಸಿರುವುದು ಶೇರು ಮಾರುಕಟ್ಟೆಗೆ ಹೊಸ ಉತ್ಸಾಹ ತುಂಬಿದೆ.