ಮುಂಬಯಿ : ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ತೇಜಿಯ ವಾತಾವರಣ ನೆಲೆಗೊಂಡಿರುವುದನ್ನು ಅನುಸರಿಸಿ ಮುಂಬಯಿ ಶೇರು ಪೇಟೆ ಇಂದು ಶುಕ್ರವಾರದ ವಹಿವಾಟನ್ನು 301 ಅಂಕಗಳ ಉತ್ತಮ ಏರಿಕೆಯೊಂದಿಗೆ 33,250.30 ಅಂಕಗಳ ಮಟ್ಟದಲ್ಲಿ ವಿಶ್ವಾಸಭರಿತವಾಗಿ ಕೊನೆಗೊಳಿಸಿತು.
ಇದೇ ಟ್ರೆಂಡ್ ಅನುಸರಿಸಿದ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 98.95ಅಂಕಗಳ ಏರಿಕೆಯೊಂದಿಗೆ ದಿನದ ವಹಿವಾಟನ್ನು 10,265.65 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ನಿನ್ನೆ ಗುರುವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 352 ಅಂಕಗಳ ಉತ್ತಮ ರಾಲಿಯನ್ನು ದಾಖಲಿಸಿತ್ತು.
ಇಂದು ಹೆಚ್ಚಿನ ಏಶ್ಯನ್ ಹಾಗೂ ಐರೋಪ್ಯ ಶೇರು ಮಾರುಕಟ್ಟೆಗಳು ಉತ್ತಮ ರಾಲಿ ಕಂಡವು. ಇದೀಗ ಜಾಗತಿಕ ಶೇರು ಮಾರುಕಟ್ಟೆಗಳ ದೃಷ್ಟಿಯು ಚೀನದ ಆರ್ಥಿಕ ಪ್ರಗತಿಯ ಅಂಕಿ ಅಂಶಗಳು ಬಿಡುಗಡೆಯಾಗುವುದರ ಮೇಲೆಯೇ ನೆಟ್ಟಿದೆ.
ಇಂದಿನ ವಹಿವಾಟಿನ ಟಾಪ್ ಗೇನರ್‌ಗಳು : ಎಚ್‌ಪಿಸಿಎಲ್, ಐಟಿಸಿ, ಬಿಪಿಸಿಎಲ್, ಎಚ್‌ಯುಎಲ್, ಟಾಟಾ ಮೋಟರ್.
ಟಾಪ್ ಗೇನರ್‌ಗಳು : ಭಾರ್ತಿ ಇನ್‌ಫ್ರಾಟೆಲ್, ಗೇಲ್, ಝೀ ಎಂಟರ್‌ಟೇನ್‌ಮೆಂಟ್, ಐಡಿಯಾ ಸೆಲ್ಯುಲರ್, ರಿಲಯನ್ಸ್.