ಮುಂಬಯಿ : ನಾಲ್ಕು ದಿನಗಳ ಕಾಲ ನಿರಂತರ ಏರಿಕೆಯ ಹಾದಿಯಲ್ಲಿ ಸಾಗಿ ಬಂದಿದ್ದ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ವಹಿವಾಟನ್ನು 73 ಅಂಕಗಳ ನಷ್ಟದೊಂದಿಗೆ 35,103.14 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿದೆ.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 38.40 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 10,679.65 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ.
ಸೆನ್ಸೆಕ್ಸ್ ಕಳೆದ ನಾಲ್ಕು ದಿನಗಳ ಏರಿಕೆಯ ಹಾದಿಯಲ್ಲಿ ಒಟ್ಟು 675.15 ಅಂಕಗಳನ್ನು ಸಂಪಾದಿಸಿತ್ತು. ಚೀನ ಮತ್ತು ಅಮೆರಿಕ ನಡುವಿನ ಆಮದು ಸುಂಕ ಏರಿಕೆ ಭಿನ್ನಾಭಿಪ್ರಾಯ ಮತ್ತೆ ತಾರಕಕ್ಕೇರುವ ಭೀತಿಯಲ್ಲಿ ಜಾಗತಿಕ ಶೇರು ಮಾರುಕಟ್ಟೆಗಳು ಇಂದು ಒತ್ತಡಕ್ಕೆ ಗುರಿಯಾಗಿದ್ದವು.
ಮುಂಬಯಿ ಶೇರು ಪೇಟೆಯ ಇಂದಿನ ಟಾಪ್ ಗೇನರ್‌ಗಳು : ಸನ್ ಫಾರ್ಮಾ, ಭಾರ್ತಿ ಇನ್‌ಫ್ರಾಟೆಲ್, ಎನ್‌ಟಿಪಿಸಿ, ಟಾಟಾ ಸ್ಟೀಲ್, ಎಕ್ಸಿಸ್ ಬ್ಯಾಂಕ್; ಟಾಪ್ ಲೂಸರ್‌ಗಳು : ಎಚ್‌ಸಿಎಲ್ ಟೆಕ್, ಐಡಿಯಾ ಸೆಲ್ಯುಲರ್, ಯುಪಿಎಲ್, ಈಶರ್ ಮೋಟರ್, ಕೋಟಕ್ ಮಹೀಂದ್ರ.
ಇಂದು ಒಟ್ಟು 2,799 ಕಂಪೆನಿಯ ಶೇರುಗಳು ವಹಿವಾಟಿಗೆ ಒಳಪಟ್ಟವು; 780 ಶೇರುಗಳು ಮುನ್ನಡೆ ಸಾಧಿಸಿದವು; 1,900 ಶೇರುಗಳು ಹಿನ್ನಡೆಗೆ ಗುರಿಯಾದವು; 119 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.