Advertisement

ಲಾಭನಗದೀಕರಣ: ಎರಡು ದಿನಗಳ ಸೆನ್ಸೆಕ್ಸ್‌ ಓಟಕ್ಕೆ ಬ್ರೇಕ್‌

04:39 PM Jun 08, 2018 | |

ಮುಂಬಯಿ : ಭಾರತೀಯ ರಿಸರ್ವ್‌ ಬ್ಯಾಂಕ್‌ ದೇಶದಲ್ಲಿನ ಹಣದುಬ್ಬರವನ್ನು ಹದ್ದುಬಸ್ತಿನಲ್ಲಿರಿಸಲು ರಿಪೋ ಮತ್ತು ರಿವರ್ಸ್‌ ರಿಪೋ ದರವನ್ನು ಶೇ.0.25ರಷ್ಟು ಏರಿಸಿ ಅನುಕ್ರಮವಾಗಿ ಶೇ.6.25 ಮತ್ತು ಶೇ.6.00ಕ್ಕೆ ನಿಗದಿಸಿದುದನ್ನು ಅನುಸರಿಸಿ ನಿರಂತರ ಎರಡು ದಿನಗಳ ಗೆಲುವಿನ ಓಟ ಕಂಡು 559.87 ಅಂಕಗಳನ್ನು ಸಂಪಾದಿಸಿದ್ದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಶುಕ್ರವಾರದ ವಹಿವಾಟನ್ನು, ಲಾಭನಗದೀಕರಣದ ಕಾರಣದಿಂದಾಗಿ, 19.41 ಅಂಕಗಳ ನಷ್ಟಕ್ಕೆ ಗುರಿಯಾಗಿ 35,443.67ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. 

Advertisement

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 0.70 ಅಂಕಗಳ ಅತ್ಯಲ್ಪ ಹಿನ್ನಡೆಯನ್ನು ಕಂಡು 10,767.65 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಕೊನೆಗೊಳಿಸಿತು.

ಹಾಗಿದ್ದರೂ ಎರಡೂ ಸೂಚ್ಯಂಕಗಳ ನಿರಂತರ ಮೂರನೇ ವಾರದಲ್ಲಿ  ಗಳಿಕೆಯನ್ನು ದಾಖಲಿಸಿರುವುದು ಗಮನಾರ್ಹವಾಗಿದೆ. ವಾರಾಂತ್ಯದ ನೆಲೆಯಲ್ಲಿ ಸೆನ್ಸೆಕ್ಸ್‌ ಈ ವಾರ 216.41 ಅಂಕಗಳ ಏರಿಕೆಯನ್ನು ದಾಖಲಿಸಿದೆ; ನಿಫ್ಟಿ 71.45 ಅಂಕಗಳ ಮುನ್ನಡೆಯನ್ನು ದಾಖಲಿಸಿದೆ. 

ನಿನ್ನೆ ಗುರುವಾರ ವಿದೇಶೀ ಹೂಡಿಕೆದಾರರು 525.40 ಕೋಟಿ ರೂ. ಶೇರುಗಳನ್ನು ಮಾರಿದ್ದರು; ವ್ಯತಿರಿಕ್ತವಾಗಿ ದೇಶೀಯ ಹೂಡಿಕೆದಾರ ಸಂಸ್ಥೆಗಳು 1,197.9 ಕೋಟಿ ರೂ. ಶೇರುಗಳನ್ನು ಖರೀದಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next