ಮುಂಬಯಿ : ದಾಖಲೆ ಸೃಷ್ಟಿಸಿದ ನಿರಂತರ ಮೂರು ದಿನಗಳ ವಹಿವಾಟಿನ ಬಳಿಕ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಶುಕ್ರವಾರದ ವಹಿವಾಟನ್ನು 85 ಅಂಕಗಳ ನಷ್ಟದೊಂದಿಗೆ ಕೊನೆಗೊಳಿಸಿ 38,251.80 ಅಂಕಗಳ ಮಟ್ಟಕ್ಕೆ ಕುಸಿಯಿತು.
ಅಮೆರಿಕ – ಚೀನ ಪರಿಹಾರ ಕಾಣದ ವಾಣಿಜ್ಯ ಬಿಕ್ಕಟ್ಟಿನ ಫಲವಾಗಿ ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ಹಿನ್ನಡೆ ತೋರಿ ಬಂದಿರುವುದನ್ನು ಅನುಸರಿಸಿ ಮುಂಬಯಿ ಶೇರು ಮಾರುಕಟ್ಟೆ ಕೂಡ ಇಂದು ನಿಸ್ತೇಜವಾಯಿತು. ಲಾಭ ನಗದೀಕರಣದ ಶೇರು ಮಾರಾಟವೇ ಇಂದಿನ ಹಿನ್ನಡೆಗೆ ಕಾರಣವಾಯಿತು.
ಹಾಗಿದ್ದರೂ ಸೆನ್ಸೆಕ್ಸ್ ಮತ್ತು ನಿಫ್ಟಿ ಇಂದು ನಿರಂತರ ಐದನೇ ವಾರವನ್ನು ಗೆಲುವಿನ ಗಳಿಕೆಯೊಂದಿಗೆ ಕೊನೆಗೊಳಿಸಿರುವುದು ಗಮನಾರ್ಹವಾಗಿದೆ. ಕಳೆದ ನಾಲ್ಕು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್ 673.20 ಅಂಕಗಳನ್ನು ಸಂಪಾದಿಸಿತ್ತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಇಂದು ಶುಕ್ರವಾರದ ವಹಿವಾಟನ್ನು 25.65 ಅಂಕಗಳ ನಷ್ಟದೊಂದಿಗೆ 11,557.10 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,879 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; 1,177 ಶೇರುಗಳು ಮುನ್ನಡೆ ಸಾಧಿಸಿದವು; 1,523 ಶೇರುಗಳು ಹಿನ್ನಡೆಗೆ ಗುರಿಯಾದವು; 179 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.