ಮುಂಬಯಿ : ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಕಳೆದ ಶುಕ್ರವಾರದ ನಷ್ಟವನ್ನು ಇಂದು ಸೋಮವಾರ ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ ಮುಂದುವರಿಸಿದೆ.
ಏಶ್ಯನ್ ಮಾರುಕಟ್ಟೆಗಳಿಂದ ಯಾವುದೇ ಸುಳಿವು ಇಲ್ಲದಿರುವು ಹಿನ್ನೆಯಲ್ಲಿ ಸೆನ್ಸೆಕ್ಸ್ 131 ಅಂಕಗಳ ಕುಸಿತವನ್ನು ಕಂಡು 34,000 ಅಂಕಗಳ ಮಟ್ಟಕ್ಕಿಂತ ಕೆಳಗೆ ಜಾರಿತು. ಕಳೆದ ಶುಕ್ರವಾರ ಸೆನ್ಸೆಕ್ಸ್ 286.71 ಅಂಕಗಳ ನಷ್ಟವನ್ನು ಅನುಭವಿಸಿತ್ತು.
ಬೆಳಗ್ಗೆ 10.40ರ ಹೊತ್ತಿಗೆ ಸೆನ್ಸೆಕ್ಸ್ 145.08 ಅಂಕಗಳ ನಷ್ಟನದೊಂದಿಗೆ 3,865.68 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 46.30 ಅಂಕಗಳ ನಷ್ಟದೊಂದಿಗೆ 10,406.00 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಟಾಟಾ ಸ್ಟೀಲ್, ಎಸ್‌ಬಿಐ, ಐಸಿಐಸಿಐ ಬ್ಯಾಂಕ್, ಇನ್‌ಫೋಸಿಸ್, ಎಸ್ ಬ್ಯಾಂಕ್ ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳಾಗಿ ಭಾರ್ತಿ ಇನ್‌ಫ್ರಾಟೆಲ್, ವೇದಾಂತ, ಗೇಲ್, ಅಂಬುಜಾ ಸಿಮೆಂಟ್ಸ್ , ಅಲ್‌ಟ್ರಾಟೆಕ್ ಸಿಮೆಂಟ್ ಕಾಣಿಸಿಕೊಂಡವು; ಟಾಪ್ ಲೂಸರ್‌ಗಳಾಗಿ ಟಾಟಾ ಸ್ಟೀಲ್, ಝೀ ಎಂಟರ್‌ಟೇನ್‌ಮೆಂಟ್, ಟೆಕ್ ಮಹೀಂದ್ರ, ಭಾರ್ತಿ ಏರ್‌ಟೆಲ್, ಎಚ್‌ಸಿಎಲ್ ಟೆಕ್ ಹಿನ್ನಡೆಗೆ ಗುರಿಯಾದವು.