Advertisement

F&O ಎಚ್ಚರಿಕೆಯ ನಡೆ: ಮುಂಬಯಿ ಶೇರು 51 ಅಂಕ ಕುಸಿತ

11:05 AM Aug 31, 2017 | |

ಮುಂಬಯಿ : ಆಗಸ್ಟ್‌ ತಿಂಗಳ ವಾಯಿದೆ ವಹಿವಾಟಿನ ಅಂತಿಮ ದಿನವಾದ ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ ಹೂಡಿಕೆದಾರರು ಮತ್ತು ವಹಿವಾಟು ದಾರರು ಎಚ್ಚರಿಕೆಯ ನಡೆ ಅನುಸರಿಸಿದ ಪರಿಣಾಮವಾಗಿ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್‌ 51 ಅಂಕಗಳ ಹಿನ್ನಡೆಗೆ ಗುರಿಯಾಯಿತು.

Advertisement

ಬೆಳಗ್ಗೆ 11 ಗಂಟೆಯ ಹೊತ್ತಿಗೆ ಸೆನ್ಸೆಕ್ಸ್‌ 56.56 ಅಂಕಗಳ ನಷ್ಟದೊಂದಿಗೆ 31,589.90 ಅಂಕಗಳ ಮಟ್ಟದಲ್ಲಿ ಮತ್ತು ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 13.70 ಅಂಕಗಳ ನಷ್ಟದೊಂದಿಗೆ 9,870.70 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು. 

ಆರಂಭಿಕ ವಹಿವಾಟಿನಲ್ಲಿಂದು ಎನ್‌ಟಿಪಿಸಿ, ರಿಲಯನ್ಸ್‌, ಹಿಂಡಾಲ್ಕೋ, ಇನ್‌ಫೋಸಿಸ್‌, ಎಚ್‌ಡಿಎಫ್ಸಿ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು. 

ಟಾಪ್‌ ಗೇನರ್‌ಗಳಾಗಿ ಬಿಪಿಸಿಎಲ್‌, ವಿಪ್ರೋ, ರಿಲಯನ್ಸ್‌, ಟೆಕ್‌ ಮಹೀಂದ್ರ, ಎಸ್‌ ಬ್ಯಾಂಕ್‌ ಶೇರುಗಳ ವಿಜೃಂಭಿಸಿದವು. ಟಾಪ್‌ ಲೂಸರ್‌ಗಳಾಗಿ ಭಾರ್ತಿ ಏರ್‌ಟೆಲ್‌, ಬಾಶ್‌, ಎಚ್‌ಸಿಎಲ್‌ ಟೆಕ್‌, ಇನ್‌ಫೋಸಿಸ್‌, ವೇದಾಂತ ಶೇರುಗಳು ಹಿನ್ನಡೆಗೆ ಗುರಿಯಾದವು. 

Advertisement

Udayavani is now on Telegram. Click here to join our channel and stay updated with the latest news.

Next