ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 35,000 ಅಂಕಗಳ ಮಟ್ಟವನ್ನು ಪುನರ್ ಸಂಪಾದಿಸಿತಾದರೂ ಅನಂತರ 71 ಅಂಕಗಳ ಕುಸಿತವನ್ನು ಕಂಡಿತು.
ಕೈಗಾರಿಕಾ ಉತ್ಪಾದನಾ ಸೂಚ್ಯಂಕ ಕಳೆದ ಆಗಸ್ಟ್ ನಲ್ಲಿ ಮೂರು ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿರುವುದು ಮತ್ತು ಸೆಪ್ಟಂಬರ್‌ನಲ್ಲಿ ಚಿಲ್ಲರೆ ಹಣದುಬ್ಬರ ಸ್ವಲ್ಪಮಟ್ಟಿನ ಏರಿಕೆಯನ್ನು ಕಂಡಿರುವುದು ಮುಂಬಯಿ ಶೇರು ಪೇಟೆಯ ಕುಸಿತಕ್ಕೆ ಕಾರಣವಾಗಿದೆ.
ಕಳೆದ ಶುಕ್ರವಾರ 732.43 ಅಂಕಗಳ ಭರ್ಜರಿ ಏರಿಕೆಯನ್ನು ಸಾಧಿಸಿದ್ದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರ ಬೆಳಗ್ಗೆ 10.50ರ ಹೊತ್ತಿಗೆ 106.96 ಅಂಕಗಳ ನಷ್ಟದೊಂದಿಗೆ 34,626.62 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 37.10 ಅಂಕಗಳ ನಷ್ಟದೊಂದಿಗೆ 10,435.40 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಡಾಲರ್ ಎದುರು ರೂಪಾಯಿ ಇಂದು ಬೆಳಗ್ಗಿನ ವಹಿವಾಟಿನಲ್ಲಿ 36 ಪೈಸೆಗಳ ಕುಸಿತವನ್ನು ಕಂಡು 73.93 ರೂ. ಮಟ್ಟಕ್ಕೆ ಕುಸಿದದ್ದು ಕೂಡ ಶೇರು ಮಾರುಕಟ್ಟೆಯ ಕುಸಿತಕ್ಕೆ ಕಾರಣವಾಗಿತ್ತು.
ಇಂದು ಬೆಳಗ್ಗಿನ ವಹಿವಾಟಿನಲ್ಲಿ ರಿಲಯನ್ಸ್, ಎಸ್ ಬ್ಯಾಂಕ್, ಎಚ್‌ಯುಎಲ್, ಟಿಸಿಎಸ್, ಐಸಿಐಸಿಐ ಬ್ಯಾಂಕ್ ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ಡಾ.ರೆಡ್ಡೀಸ್ ಲ್ಯಾಬ್, ಭಾರ್ತಿ ಇನ್‌ಫ್ರಾಟೆಲ್, ವೋಡೋಫೋನ್, ಸಿಪ್ಲಾ, ಹಿಂಡಾಲ್ಕೋ; ಟಾಪ್ ಲೂಸರ್‌ಗಳು : ಗೇಲ್, ಎಚ್‌ಯುಎಲ್, ಈಶರ್‌ವೊàಟರ್, ಐಸಿಐಸಿಐ ಬ್ಯಾಂಕ್ .