Advertisement

ಜೂನ್‌ ವಾಯಿದೆ ವಹಿವಾಟಿಗೆ ನಷ್ಟದ ಆರಂಭ: ಸೆನ್ಸೆಕ್ಸ್‌ 95 ಅಂಕ ಕುಸಿತ

04:17 PM Jun 01, 2018 | |

ಮುಂಬಯಿ : ಜೂನ್‌ ತಿಂಗಳ ವಾಯಿದೆ ವಹಿವಾಟಿನ ಆರಂಭದ ದಿನವಾದ ಇಂದು ಶುಕ್ರವಾರ ಶೇರು ದರಗಳು ತಿದ್ದುಪಡಿ ಪ್ರಕ್ರಿಯೆಗೆ ಗುರಿಯಾದ ಕಾರಣ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್‌ ಸೂಚ್ಯಂಕ 95.12 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 35,227.26 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. 

Advertisement

10,700ಕ್ಕಿಂತ ಕೆಳಮಟ್ಟಕ್ಕೆ ಕುಸಿದ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ದಿನದ ವಹಿವಾಟನ್ನು  39.95 ಅಂಕಗಳ ಕುಸಿತದೊಂದಿಗೆ 10,696.20 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. 

ಮಾರ್ಚ್‌ ತ್ತೈಮಾಸಿಕದಲ್ಲಿ ದೇಶದ ಜಿಡಿಪಿ ಶೇ.7.7ರ ಎತ್ತರವನ್ನು ಕಂಡಿರುವ ಕಾರಣಕ್ಕೆ ಇಂದಿನ ಆರಂಭಿಕ ವಹಿವಾಟಿನಲ್ಲಿ ಮುಂಬಯಿ ಶೇರು ಪೇಟೆ ಉತ್ತಮ ಜಿಗಿತವನ್ನು ಕಂಡಿತ್ತು. ಆದರೆ ಅನಂತರದಲ್ಲಿ ತನ್ನ ಗಳಿಕೆಯನ್ನು ಬಿಟ್ಟುಕೊಟ್ಟಿತು. ನಿನ್ನೆ ಗುರುವಾರದ ವಹಿವಾಟನ್ನು ಸೆನ್ಸೆಕ್ಸ್‌ 416.26 ಅಂಕಗಳ ಭರ್ಜರಿ ಜಿಗಿತದೊಂದಿಗೆ ಮುಗಿಸಿತ್ತು. 

ಮುಂಬಯಿ ಶೇರು ಪೇಟೆಯಲ್ಲಿ ಇಂದು ಒಟ್ಟು 2,825 ಕಂಪೆನಿಗಳ ಶೇರು ವಹಿವಾಟಿಗೆ ಒಳಪಟ್ಟವು; ಈ ಪೈಕಿ ಕೇವಲ 715 ಶೇರುಗಳು ಮುನ್ನಡೆ ಕಂಡವು; 1,984 ಶೇರುಗಳು ಹಿನ್ನಡೆಗೆ ಗುರಿಯಾದವು; 126 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next