Advertisement

ಸೆಪ್ಟಂಬರ್‌ ಮೊದಲ ದಿನ 161 ಅಂಕ ಜಿಗಿದ ಮುಂಬಯಿ ಶೇರು

04:17 PM Sep 01, 2017 | |

ಮುಂಬಯಿ: ಸೆಪ್ಟಂಬರ್‌ ತಿಂಗಳ ವಹಿವಾಟಿನ ಮೊದಲ ದಿನವಾದ ಇಂದು ಶುಕ್ರವಾರ ಮುಂಬಯಿ ಶೇರು ಮಾರುಕಟ್ಟೆ ಯ ಸೆನ್ಸೆಕ್ಸ್‌ 161.74 ಅಂಕಗಳ ಮುನ್ನಡೆಯನ್ನು ದಾಖಲಿಸಿ 31,892.23 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಆಶಾದಾಯಕವಾಗಿ ಕೊನೆಗೊಳಿಸಿತು.

Advertisement

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 56.50 ಅಂಕಗಳ ಮುನ್ನಡೆಯನ್ನು ಪಡೆದುಕೊಂಡು ದಿನದ ವಹಿವಾಟನ್ನು 9,974.40 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. 

ಇಂದು ವಹಿವಾಟಿಗೆ ಒಳಪಟ್ಟ ಶೇರುಗಳ ಪೈಕಿ 1,588 ಶೇರುಗಳು ಮುನ್ನಡೆ ಸಾಧಿಸಿದವು; 993 ಶೇರುಗಳ ಹಿನ್ನಡೆಗೆ ಗುರಿಯಾದವು.

ಕೇಂದ್ರದಲ್ಲಿನ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಚಿವ ಸಂಪುಟ ಪುನಾರಚನೆಯನ್ನು ನಾಳೆ ಭಾನುವಾರ ಕೈಗೊಳ್ಳಲಿದ್ದು ಆ ಪರಿಣಾಮವಾಗಿ ಸುಮಾರು ಎರಡು ಡಜನ್‌ ಸಚಿವರು ಬಾಧಿತರಾಗುವುದನ್ನು ಶೇರು ಮಾರುಕಟ್ಟೆ ಇದೀಗ ಕಾತರದಿಂದ ಎದುರು ನೋಡುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next