ಮುಂಬಯಿ : ಏಶ್ಯನ್ ಶೇರು ಪೇಟೆಗಳಲ್ಲಿ ತೋರಿ ಬಂದಿರುವ ಧನಾತ್ಮಕತೆ, ರೂಪಾಯಿ ಮೌಲ್ಯ ಏರಿಕೆ ಮತ್ತು ಆಟೋ, ತೈಲ, ಅನಿಲ, ಮೆಟಲ್ ಕ್ಷೇತ್ರದ ಮೌಲ್ಯಯುತ ಶೇರುಗಳ ವ್ಯಾಪಕ ಖರೀದಿ ಇವೇ ಮೊದಲಾದ ಕಾರಣಗಳಿಗೆ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 68.58 ಅಂಕಗಳ ಏರಿಕೆಯನ್ನು ದಾಖಲಿಸಿತು.
ಡಾಲರ್ ಎದುರು ರೂಪಾಯಿ ಇಂದು ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ 7 ಪೈಸೆಯ ಏರಿಕೆಯನ್ನು ದಾಖಲಿಸಿ 70.34 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಬೆಳಗ್ಗೆ 10.30ರ ಸುಮಾರಿಗೆ ಸೆನ್ಸೆಕ್ಸ್ 2.08 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 36,108.58 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 1.10 ಅಂಕಗಳ ನಷ್ಟಕ್ಕೆ ಗುರಿಯಾಗಿ 10,820.50 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದಿನ ಬೆಳಗ್ಗಿನ ವಹಿವಾಟಿನಲ್ಲಿ ಟಿಸಿಎಸ್, ಎಸ್ ಬ್ಯಾ,ಕ್, ಇನ್‌ಫೋಸಿಸ್, ಎಕ್ಸಿಸ್ ಬ್ಯಾಂಕ್, ರಿಲಯನ್ಸ್ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಬೆಳಗ್ಗಿನ ವಹಿವಾಟಿನ ಟಾಪ್ ಗೇನರ್‌ಗಳು : ಐಟಿಸಿ, ಗ್ರಾಸಿಂ, ಹಿಂಡಾಲ್ಕೋ, ಯುಪಿಎಲ್, ಒಎನ್‌ಜಿಸಿ; ಟಾಪ್ ಲೂಸರ್‌ಗಲು : ಟಿಸಿಎಸ್, ಭಾರ್ತಿ ಏರ್‌ಟೆಲ್ , ಲಾರ್ಸನ್, ಎಚ್‌ಸಿಎಲ್ ಟೆಕ್, ಗೇಲ್.