ಮುಂಬಯಿ : ಬಡ್ಡಿ ಪರಿಷ್ಕರಣೆ ಕುರಿತ ಅಮೆರಿಕ ಫೆಡರಲ್ ರಿಸರ್ವ್ ಬ್ಯಾಂಕ್ ಸಭೆಯ ನಿರ್ಧಾರ ಇಂದು ಸಂಜೆಯ ವೇಳೆಗೆ ಪ್ರಕಟವಾಗಲಿರುವಂತೆಯೇ ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ಇಂದು ಬೆಳಗ್ಗಿನ ವಹಿವಾಟಿನಲ್ಲಿ ಸ್ಥಿರತೆ ತೋರಿ ಬಂದಿದೆ. ಅಂತೆಯೇ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ 226.85 ಅಂಕಗಳ ಉತ್ತಮ ಏರಿಕೆಯನ್ನು ಸಾಧಿಸಿ 33,223.62 ಅಂಕಗಳ ಮಟ್ಟಕ್ಕೆ ಏರಿತು. ನಿನ್ನೆ ಮಂಗಳವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 73.64 ಅಂಕಗಳ ಏರಿಕೆಯನ್ನು ದಾಖಲಿಸಿತ್ತು.
ಇಂದಿನ ಆರಂಭಿಕ ವಹಿವಾಟಿನಲ್ಲಿ ರಿಯಲ್ಟಿ, ಬ್ಯಾಂಕಿಂಗ್ ಮತ್ತು ಪಿಎಸ್‌ಯು ಕಂಪೆನಿಯ ಶೇರುಗಳು ಶೇ.1.50 ಪ್ರಮಾಣ ಮಟ್ಟದಲ್ಲಿ ಉತ್ತಮ ಮುನ್ನಡೆ ದಾಖಲಿಸಿದವು.
ಬೆಳಗ್ಗೆ 11.15 ರ ಹೊತ್ತಿಗೆ ಸೆನ್ಸೆಕ್ಸ್ 336.05 ಅಂಕಗಳ ಭರ್ಜರಿ ಮುನ್ನಡೆಯನ್ನು ಸಾಧಿಸಿ 33,332.81 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 9820 ಅಂಕಗಳ ಏರಿಕೆಯೊಂದಿಗೆ 10,222.60 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಮಾರುತಿ ಸುಜುಕಿ, ಟಾಟಾ ಸ್ಟೀಲ್, ರಿಲಯನ್ಸ್, ಎಚ್ ಡಿ ಎಫ್ ಸಿ ಮತ್ತು ಎಸ್ ಬಿ ಐ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಡಾಲರ್ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ 1 ಪೈಸೆಯ ಸುಧಾರಣೆ ದಾಖಲಿಸಿ 65.19 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.