ಮುಂಬಯಿ : ದೇಶದ ಆರ್ಥಿಕಾಭಿವೃದ್ಧಿ ಸ್ಥೂಲ ಅಂಕಿ ಅಂಶಗಳು ಧನಾತ್ಮಕವಾಗಿರುವ ಹಿನ್ನೆಲೆಯಲ್ಲಿ ಇನ್‌ಫೋಸಿಸ್ ನ ನಾಲ್ಕನೇ ತ್ತೈಮಾಸಿಕ ಮತ್ತು ವಾರ್ಷಿಕ ಫಲಿತಾಂಶ ಪ್ರಕಟವಾಗುವ ಮುನ್ನವೇ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 100ಕ್ಕೂ ಹೆಚ್ಚು ಅಂಕಗಳ ಮುನ್ನಡೆಯನ್ನು ಸಾಧಿಸಿತು.
ಸೆನ್ಸೆಕ್ಸ್‌ನ ಮುನ್ನಡೆಯು ನಿರಂತರ ಏಳನೇ ದಿನದಲ್ಲಿ ದಾಖಲಾಗಿರುವುದು ಗಮನಾರ್ಹವಾಗಿದೆ. ಕಳೆದ ಆರು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್ ಒಟ್ಟು 1,082.06 ಅಂಕಗಳನ್ನು ಸಂಪಾದಿಸಿದೆ.
ಇಂದು ಬೆಳಗ್ಗೆ 10.30ರ ಹೊತ್ತಿಗೆ ಸೆನ್ಸೆಕ್ಸ್ 156.98 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 34,258.11 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 44.80 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 10,503.50 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿತ್ತು.
ಇನ್‌ಫೋಸಿಸ್, ಟಿಸಿಎಸ್, ಹಿಂಡಾಲ್ಕೊ, ಎಸ್‌ಬಿ, ಐಸಿಐಸಿಐ ಬ್ಯಾಂಕ್ ಶೇರುಗಳು ಇಂದು ಬೆಳಗ್ಗಿನ ವಹಿವಾಟಿನಲ್ಲಿ ಅತ್ಯಂತ ಕ್ರಿಯಾಶೀಲವಾಗಿದ್ದವು.
ಅದಾನಿ ಪೋರ್ಟ್, ಭಾರ್ತಿ ಏರ್‌ಟೆಲ್, ಕೋಟಕ್ ಬ್ಯಾಂಕ್, ಎಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಏಶ್ಯನ್ ಪೇಂಟ್ಸ್, ಬಜಾಜ್ ಆಟೋ, ಟಾಟಾ ಸ್ಟೀಲ್, ಡಾ.ರೆಡ್ಡೀಸ್, ಆರ್‌ಐಎಲ್ ಶೇರುಗಳು ಟಾಪ್ ಗೇನರ್ ಆಗಿ ಮುನ್ನಡೆ ಸಾಧಿಸಿದವು.