ಮುಂಬಯಿ : ಬಲವರ್ಧಿತ ರೂಪಾಯಿ, ವಿದೇಶ ಬಂಡವಾಳದ ಹೊಸ ಹರಿವು ಇವೇ ಮೊದಲಾದ ಕಾರಣಗಳಿಗೆ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ವಹಿವಾಟನ್ನು 100ಕ್ಕೂ ಅಧಿಕ ಅಂಕಗಳ ಮಟ್ಟದಲ್ಲಿ ಆಶಾದಾಯಕವಾಗಿ ಆರಂಭಿಸಿತು. ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 10,600 ಅಂಕಗಳ ಮಟ್ಟವನ್ನು ದಾಟುವಲ್ಲಿ ಸಫಲವಾಯಿತು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ 24 ತಾಸುಗಳ ಚೇತರಿಕೆಯನ್ನು ಕ,ಡು 72.07 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿದ್ದುದು ಶೇರು ಮಾರುಕಟ್ಟೆಗೆ ಉತ್ಸಾಹ ತುಂಬಿತು.
ಬೆಳಗ್ಗೆ 10.30ರ ಸುಮಾರಿಗೆ ಸೆನ್ಸೆಕ್ಸ್ 16.26 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 35,158.25 ಅಂಕಗಳ ಮಟ್ಟದಲ್ಲೂ ನಿಫ್ಟಿ 0.10 ಅಂಕಗಳ ನಷ್ಟದೊಂದಿಗೆ 10,576.20 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಎಸ್ ಬ್ಯಾಂಕ್, ರಿಲಯನ್ಸ್, ಮಾರುತಿ ಸುಜುಕಿ, ಸನ್ ಫಾರ್ಮಾ, ಎಚ್ ಡಿ ಎಫ್ ಸಿ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ಹೀರೋ ಮೋಟೋಕಾರ್ಪ್, ಟಾಟಾ ಮೋಟರ್, ಟೈಟಾನ್ ಕಂಪೆನಿ, ಅದಾನಿ ಪೋರ್ಟ್, ಎಚ್‌ಸಿಎಲ್ ಟೆಕ್; ಟಾಪ್ ಲೂಸರ್‌ಗಳು: ಗ್ರಾಸಿಂ, ಎಸ್‌ಬ್ಯಾಂಕ್, ಇಂಡಿಯಾ ಬುಲ್ಸ್ ಹೌಸಿಂಗ್, ಬಿಪಿಸಿಎಲ್, ಸನ್ ಫಾರ್ಮಾ.