Advertisement
ಬೆಳಗ್ಗೆ 11 ಗಂಟೆಯ ಹೊತ್ತಿಗೆ ಸೆನ್ಸೆಕ್ಸ್ 115.70 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 33,486.33 ಅಂಕಗಳ ಮಟ್ಟದಲ್ಲೂ ನಿಫ್ಟಿ 29 ಅಂಕಗಳ ಮುನ್ನಡೆಯೊಂದಿಗೆ 10,274.00 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
Related Articles
Advertisement
ಇಂದಿನ ಟಾಪ್ ಗೇನರ್‌ಗಳಾಗಿ ಟಾಟಾ ಮೋಟರ್, ಹೀರೋ ಮೋಟೋ ಕಾರ್ಪ್, ಬಜಾಜ್ ಆಟೋ, ಎಸ್ ಬ್ಯಾಂಕ್ ಮತ್ತು ಮಾರುತಿ ಸುಜುಕಿ ವಿಜೃಂಭಿಸಿದವು. ವಾಲ್ ಸ್ಟ್ರೀಟ್‌ನಲ್ಲಿನ ಧನಾತ್ಮಕ ಸನ್ನಿವೇಶವನ್ನು ಅನುಸರಿಸಿ ಏಶ್ಯನ್ ಶೇರು ಪೇಟೆಗಳಲ್ಲಿ ಕಂಡು ಬಂದಿರುವ ತೇಜಿ ಮುಂಬಯಿ ಶೇರು ಪೇಟೆಯಲ್ಲೂ ಪ್ರತಿಬಿಂಬಿಸಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಡಾಲರ್ ಎದುರು ರೂಪಾಯಿ ವಿನಿಮಯ ದರ ಇಂದು 4 ಪೈಸೆಯಷ್ಟು ಚೇತರಿಸಿಕೊಂಡು 64.97 ರೂ. ಮಟ್ಟದಲ್ಲಿ ದಾಖಲಾಯಿತು.