ಮುಂಬಯಿ : ಮುಂಬಯಿ ಶೇರು ಪೇಟೆಯಲ್ಲಿ ಗೂಳಿಯಾಟ ಮುಂದುವರಿದಿದ್ದು ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 74 ಅಂಕಗಳ ಮುನ್ನಡೆ ಸಾಧಿಸಿತಾದರೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 9,900 ಅಂಕಗಳ ಮಟ್ಟವನ್ನು ಪುನರ್‌ಸ ಸಂಪಾದಿಸಿ ವಿಕ್ರಮ ದಾಖಲಿಸಿತು.
ಬೆಳಗ್ಗೆ 10.30ರ ಹೊತ್ತಿಗೆ 89.13 ಅಂಕಗಳ ಏರಿಕೆಯೊಂದಿಗೆ 32,109.88 ಅಂಕಗಳ ಮಟ್ಟದಲ್ಲೂ , ನಿಫ್ಟಿ 28.30 ಅಂಕಗಳ ಏರಿಕೆಯೊಂದಿಗೆ 9,914.65 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇದೇ ವೇಳೆ ಸ್ಟ್ರೇಟ್ ಟೈಮ್ಸ್ 5.72, ಹ್ಯಾಂಗ್‌ಸೆಂಗ್ 152.77 ಮತ್ತು ಜಪಾನಿನ ನಿಕ್ಕಿ 19.05 ಅಂಕಗಳ ಮುನ್ನಡೆಯನ್ನು ಸಾಧಿಸಿವೆ.
ರಿಲಯನ್ಸ್, ಇನ್‌ಫೋಸಿಸ್, ಐಟಿಸಿ, ಟಿಸಿಎ, ಎಸ್‌ಬಿಐ ಶೇರುಗಳು ಇಂದಿನ ಆರಂಭಿಕ ವಹಿವಾಟಿನಲ್ಲಿ ಅತೀ ಹೆಚ್ಚು ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳ ಪಟ್ಟಿಯಲ್ಲಿ ವಿಪ್ರೋ, ಟೆಕ್ ಮಹೀಂದ್ರ, ಇನ್‌ಫೋಸಿಸ್, ವೇದಾಂತ, ಅದಾನಿ ಶೇರುಗಳು ಕಾಣಿಸಿಕೊಂಡವು. ಟಾಪ್ ಲೂಸರ್‌ಗಳಾಗಿ ಐಟಿಸಿ, ಗೇಲ್, ಅರಬಿಂದೋ ಫಾರ್ಮಾ, ಕೋಲ್ ಇಂಡಿಯಾ, ಸನ್ ಫಾರ್ಮಾ ಶೇರುಗಳು ಹಿನ್ನಡೆಗೆ ಗುರಿಯಾದವು.
ಅಮೆರಿಕದ ಡೋವ್ ಜೋನ್ಸ್ ಕೈಗಾರಿಕಾ ಸರಾಸರಿ ಕಳೆದ ಶುಕ್ರವಾರ ಶೇ.0.39ರ ಏರಿಕೆಯನ್ನು ಕಂಡು ಇನ್ನೊಂದು ದಾಖಲೆಯ ಎತ್ತರವನ್ನು ಕಂಡಿತು.