Advertisement

ನಿರಂತರ ಮೂರನೇ ದಿನ ಮುಂಬಯಿ ಶೇರು 205 ಅಂಕ ಏರಿಕೆ

05:01 PM Dec 11, 2017 | udayavani editorial |

ಮುಂಬಯಿ : ಜಾಗತಿಕ ಮಾರುಕಟ್ಟೆಗಳಲ್ಲಿ ತೋರಿ ಬಂದಿರುವ ಧನಾತ್ಮಕತೆಯನ್ನು ಅನುಸರಿಸಿ ದೇಶೀಯ ಸಾಂಸ್ಥಿಕ ಹೂಡಿಕೆದಾರರು ಮುಂಚೂಣಿ ಶೇರುಗಳ ಖರೀದಿಯಲ್ಲಿ ತೊಡಗಿಕೊಂಡ ಕಾರಣ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ನಿರಂತರ ಮೂರನೇ ದಿನವಾಗಿ, ಇಂದು ಸೋಮವಾರದ ವಹಿವಾಟನ್ನು 205 ಅಂಕಗಳ ಮುನ್ನಡೆಯೊಂದಿಗೆ 33,455.79 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

Advertisement

ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ ಇಂದಿನ ವಹಿವಾಟನ್ನು 10,300 ಅಂಕಗಳ ಮೇಲ್ಮಟ್ಟದಲ್ಲಿ ಕೊನೆಗೊಳಿಸಿತು.

ಗುಜರಾತ್‌ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗೆಲ್ಲಲಿದೆ ಎಂಬ ಲೆಕ್ಕಾಚಾರವೇ ಇಂದು ಮುಂಬಯಿ ಶೇರು ಪೇಟೆಯ ತೇಜಿಗೆ ಕಾರಣವಾಯಿತು. ಸೆನ್ಸೆಕ್ಸ್‌ನ ಇಂದಿನ ದಿನಾಂತ್ಯದ ಎತ್ತರವು ನ.29ರ ಬಳಿಕದಲ್ಲಿ ದಾಖಲಾಗಿರುವ ಗರಿಷ್ಠ ಎತ್ತರವಾಗಿದೆ. ಕಳೆದ ಎರಡು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್‌ 653.12 ಅಂಕಗಳ ಮುನ್ನಡೆಯನ್ನು ಸಂಪಾದಿಸಿತ್ತು.

ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಇಂದಿನ ವಹಿವಾಟನ್ನು 56.60 ಅಂಕಗಳ ಏರಿಕೆಯೊಂದಿಗೆ 10,322.25 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. 

Advertisement

Udayavani is now on Telegram. Click here to join our channel and stay updated with the latest news.

Next