ಮುಂಬಯಿ : ಜಿಎಸ್‌ಟಿ ವಿಷಯದಲ್ಲಿ ತೃಪ್ತಿಕರ ಪ್ರಗತಿ ಆಗಿರುವ ಕಾರಣಕ್ಕೆ ಮುಂಬಯಿ ಶೇರು ಪೇಟೆ ಇಂದು ಸೋಮವಾರ ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ 146 ಅಂಕಗಳ ಉತ್ತಮ ಜಿಗಿತವನ್ನು ದಾಖಲಿಸಿತು.
ಬೆಳಗ್ಗೆ 10.45ರ ಹೊತ್ತಿಗೆ ಸೆನ್ಸೆಕ್ಸ್ 154.65 ಅಂಕಗಳ ಮುನ್ನಡೆಯೊಂದಿಗೆ 31,211.05 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 38.25 ಅಂಕಗಳ ಜಿಗಿತದೊಂದಿಗೆ 9,26.30 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿತ್ತು.
ರಿಲಯನ್ಸ್, ಎಸ್ ಬ್ಯಾಂಕ್, ಅದಾನಿ ಪೋರ್ಟ್, ಟಾಟಾ ಸ್ಟೀಲ್, ಎಸ್‌ಬಿಐ ಶೇರುಗಳು ತೀವ್ರವಾಗಿ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳಾಗಿ ಭಾರ್ತಿ ಇನ್‌ಫ್ರಾಟೆಲ್, ಅದಾನಿ ಪೋರ್ಟ್, ರಿಲಯನ್ಸ್, ಟಾಟಾ ಸ್ಟೀಲ್, ಇಂಡಸ್ ಇಂಡ್ ಬ್ಯಾಂಕ್‌ಗಳು ಮೂಡಿ ಬ,ದರೆ ಟಾಪ್ ಲೂಸರ್‌ಗಳಾಗಿ ಸಿಪ್ಲಾ, ಕೋಲ್ ಇಂಡಿಯಾ, ಅರಬಿಂದೋ ಫಾಮಾ, ಡಾ.ರೆಡ್ಡಿ, ಸನ್ ಫಾರ್ಮಾ ಕಂಡು ಬಂದವು.
ಏಶ್ಯನ್ ಶೇರು ಮಾರುಕಟ್ಟೆಗಳ ಪೈಕಿ ಜಪಾನಿನ ನಿಕ್ಕಿ ಶೇ.0.60, ಚೀನನ ಶಾಂಘೈ ಕಾಂಪೋಸಿಟ್ ಇಂಡೆಕ್ಸ್ ಶೇ.0.44, ಹಾಂಕಾಂಗ್‌ನ ಹ್ಯಾಂಗ್ ಸೆಂಗ್ ಶೇ.0.92ರಷ್ಟು ಆರಂಭಿಕ ವಹಿವಾಟಿನಲ್ಲಿ ಮುನ್ನಡೆ ಸಾಧಿಸಿದವು.