Advertisement
ಹಾಗಿದ್ದರೂ ಇಂದಿನ ತೇಜಿಗೆ ಶಾರ್ಟ್ ಕವರಿಂಗ್ ಕೂಡ ಕಾರಣವೆಂದು ವಿಶ್ಲೇಷಕರು ಹೇಳಿದರು. ಏಶ್ಯನ್ ಶೇರು ಮಾರುಕಟ್ಟೆಗಳಲ್ಲಿ ಇಂದು ಕಂಡುಬಂದ ತೇಜಿಯನ್ನು ಅನುಸರಿಸಿ ಮುಂಬಯಿ ಶೇರು ಪೇಟೆ ಕೂಡ ಮುನ್ನಡೆಯತೊಡಗಿತು. ನಿನ್ನೆಯ ದಿನ ಸೆನ್ಸೆಕ್ಸ್ 115.37 ಅಂಕಗಳ ನಷ್ಟಕ್ಕೆ ಗುರಿಯಾಗಿತ್ತು.
ಟಿಸಿಎಸ್, ರಿಲಯನ್ಸ್, ಹಿಂಡಾಲ್ಕೋ, ಮಾರುತಿ ಸುಜುಕಿ, ಎಕ್ಸಿಸ್ ಬ್ಯಾಂಕ್ ಶೇರುಗಳು ಇಂದಿನ ಆರಂಭಿಕ ವಹಿವಾಟಿನಲ್ಲಿ ಅತ್ಯಂತ ಕ್ರಿಯಾಶೀಲವಾಗಿದ್ದವು. ಇಂದು ಡಾಲರ್ ಎದುರು ರೂಪಾಯಿ ವಿನಿಮಯ ದರ ಹದಿನಾಲ್ಕು ತಿಂಗಳ ಕನಿಷ್ಠ ಮಟ್ಟದಿಂದ ಮೇಲೆದ್ದು 11 ಪೈಸೆಯಷ್ಟು ಸುಧಾರಿಸಿ 66.79 ರೂ. ಮಟ್ಟವನ್ನು ತಲುಪಿತು.