Advertisement

ಮೂರು ದಿನಗಳ ಕುಸಿತಕ್ಕೆ ಬ್ರೇಕ್‌: ಸೆನ್ಸೆಕ್ಸ್‌ 141 ಅಂಕ ಏರಿಕೆ

04:21 PM Feb 21, 2018 | |

ಮುಂಬಯಿ : ಮೂರು ದಿನಗಳ ನಿರಂತರ ಕುಸಿತಕ್ಕೆ ಕೊನೆಗೂ ಬ್ರೇಕ್‌ ಹಾಕುವಲ್ಲಿ ಸಫ‌ಲವಾಗಿರುವ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್‌ ಸೂಚ್ಯಂಕ, ಹೂಡಿಕೆದಾರರಿಂದ ನಡೆದ ಮೌಲ್ಯಯುತ ಶೇರುಗಳ ವ್ಯಾಪಕ ಖರೀದಿಯ ಬಲದಲ್ಲಿ 141.27 ಅಂಕಗಳ ಏರಿಕೆಯೊಂದಿಗೆ ಇಂದು ಬುಧವಾರದ ವಹಿವಾಟನ್ನು 33,844.86 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ.

Advertisement

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 37.05 ಅಂಕಗಳ ಏರಿಕೆಯನ್ನು ದಾಖಲಿಸಿ 10,397.45 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಕೊನೆಗೊಳಿಸಿತು. 

ಸೆನ್ಸೆಕ್ಸ್‌ ಕಳೆದ ಮೂರು ದಿನಗಳ ವಹಿವಾಟಿನಲ್ಲಿ ಒಟ್ಟಾರೆಯಾಗಿ 593.88 ಅಂಕಗಳ ನಷ್ಟಕ್ಕೆ ಗುರಿಯಾಗಿದ್ದು ಇಂದು ಬುಧವಾರದ ಏರಿಕೆಯು ಸಮಾಧಾನವನ್ನು ತಂದಿತು. ಕಚ್ಚಾ ತೈಲ ದರದಲ್ಲಿನ ಇಳಿಕೆಯು ಶೇರು ಮಾರುಕಟ್ಟೆಗೆ ಅನುಕೂಲಕರವಾಗಿ ಪರಿಣಮಿಸಿತು. 

ಇಂದಿನ ವಹಿವಾಟಿನಲ್ಲಿ ಎಚ್‌ಸಿಎಲ್‌ ಟೆಕ್‌, ಟೆಕ್‌ ಮಹೀಂದ್ರ, ಟಿಸಿಎಸ್‌, ಐಟಿಸಿ, ಒಎನ್‌ಜಿಸಿ ಶೇರುಗಳು ಟಾಪ್‌ ಗೇನರ್‌ ಎನಿಸಿಕೊಂಡವು; ಸನ್‌ ಫಾರ್ಮಾ, ಹಿಂಡಾಲ್ಕೊ, ಬಜಾಜ್‌ ಫಿನಾನ್ಸ್‌, ಇಂಡಸ್‌ಇಂಡ್‌ ಬ್ಯಾಂಕ್‌, ಟಾಟಾ ಸ್ಟೀಲ್‌ ಶೇರುಗಳು ಟಾಪ್‌ ಲೂಸರ್‌ ಎನಿಸಿಕೊಂಡವು. 

Advertisement

Udayavani is now on Telegram. Click here to join our channel and stay updated with the latest news.

Next