ಮುಂಬಯಿ : ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ 99 ಅಂಕಗಳ ಏರಿಕೆಯನ್ನು ದಾಖಲಿಸಿದ್ದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ, 11.15 ಗಂಟೆಯ ಹೊತ್ತಿಗೆ 24.98 ಅಂಕಗಳ ಮಟ್ಟಕ್ಕೆ ಇಳಿದು 29,946.16 ಅಂಕಗಳ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಇದೇ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 12.10 ಅಂಕಗಳ ಏರಿಕೆಯನ್ನು ಉಳಿಸಿಕೊಂಡು 9,325.90 ಅಂಕಗಳ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ವಿಶಾಲ ತಳಹದಿಯ ಮಾರುಕಟ್ಟೆ ವಹಿವಾಟು ಬೆಂಚ್ ಮಾರ್ಕ್‌ಗಳಿಂದ ಉತ್ತಮ ನಿರ್ವಹಣೆ ತೋರುತ್ತಿರುವುದು ಇಂದಿನ ವಿಶೇಷವಾಗಿದೆ. ಅಂತೆಯೇ ಬಿಎಸ್‌ಎಫ್ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕ ತಲಾ ಶೇ.0.4ರ ಏರಿಕೆಯನ್ನು ದಾಖಲಿಸಿವೆ.
ಇದೇ ರೀತಿ ಸೆನ್ಸೆಕ್ಸ್ ಇಂದು ಆರಂಭಿಕ ವಹಿವಾಟಿನಲ್ಲಿ 30,000 ಅಂಕಗಳ ಮಟ್ಟವನ್ನು ಪುನರ್ ಸಂಪಾದಿಸಿರುವುದು ಕೂಡ ವಿಶೇಷವೆನಿಸಿತು.
ಜಾಗತಿಕವಾಗಿ ಅಮೆರಿಕದ ಡೋವ್ ಜೋನ್ಸ್ ನಿನ್ನೆ ಶೇ.0.17ರಷ್ಟು ಮುನ್ನಡೆಯನ್ನು ಸಾಧಿಸಿರುವುದು ಭಾರತೀಯ ಮಾರುಕಟ್ಟೆಗೆ ವಿಶೇಷ ಸ್ಫೂರ್ತಿಯನ್ನು ಒದಗಿಸಿತು. ಇಂದು ಜಪಾನ್, ಹಾಂಕಾಂಗ್, ದಕ್ಷಿಣ ಕೋರಿ ಶೇರು ಮಾರುಕಟ್ಟೆಗಳು ಸಾರ್ವಜನಿಕ ರಜೆ ಪ್ರಯುಕ್ತವಾಗಿ ಮುಚ್ಚಿವೆ.