ಮುಂಬಯಿ : ಐಟಿ ಮತ್ತು ಫಾರ್ಮಾ ಶೇರುಗಳ ಭರಾಟೆಯ ಖರೀದಿಯ ಬಲದಲ್ಲಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಶುಕ್ರವಾರದ ವಹಿವಾಟಿನಲ್ಲಿ 145 ಅಂಕಗಳ ಜಿಗಿತವನ್ನು ಸಾಧಿಸಿ ದಿನದ ವಹಿವಾಟನ್ನು 36,496.37 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 53.10 ಅಂಕಗಳ ಏರಿಕೆಯನ್ನು ದಾಖಲಿಸುವ ಮೂಲಕ ದಿನದ ವಹಿವಾಟನ್ನು 11,030.25 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಕಳೆದ ಎರಡು ದಿನಗಳ ವಹಿವಾಟಿನಲ್ಲಿ 168.73 ಅಂಕಗಳ ನಷ್ಟಕ್ಕೆ ಗುರಿಯಾಗಿದ್ದ ಸೆನ್ಸೆಕ್ಸ್ ಇಂದು ಲೋಕಸಭೆಯ ವಿಶ್ವಾಸ ಮತದ ಫಲಿತಾಂಶದ ಬಗ್ಗೆ ಚಿಂತಿಸದೆ ಮುನ್ನುಗ್ಗಿತು.
ಹಾಗಿದ್ದರೂ ಸೆನ್ಸೆಕ್ಸ್ ಕಳೆದ ಮೂರು ವಾಗಳಲ್ಲೇ ಮೊದಲ ಬಾರಿಗೆ ಸಾಪ್ತಾಹಿಕ ನೆಲೆಯಲ್ಲಿ 45.26 ಅಂಕಗಳ (ಶೇ.0.12) ನಷ್ಟಕ್ಕೆ ಗುರಿಯಾಯಿತು. ನಿಫ್ಟಿ 8.70 ಅಂಕಗಳೊಂದಿಗೆ ಶೇ.0.08ರ ನಷ್ಟವನ್ನು ದಾಖಲಿಸಿತು.
ನಿನ್ನೆ ಗುರುವಾರ ದೇಶೀಯ ಹೂಡಿಕೆದಾರ ಸಂಸ್ಥೆಗಳು 470.02 ಕೋಟಿ ರೂ. ಶೇರುಗಳನ್ನು ಖರೀದಿಸಿದ್ದರೆ ವಿದೇಶೀ ಹೂಡಿಕೆದಾರ ಸಂಸ್ಥೆಘಳು 315.69 ಕೋಟಿ ರೂ. ಶೇರುಗಳನ್ನು ಮಾರಿದ್ದವು.