ಮುಂಬಯಿ : ಅಂತಾರಾಷ್ಟ್ರೀಯ ಶೇರು ಮಾರುಕಟ್ಟೆಗಳಲ್ಲಿ ತೋರಿ ಬಂದಿರುವ ಋಣಾತ್ಮಕ ಸುಳಿವುಗಳನ್ನು ಅನುಸರಿಸಿ ಮುಂಬಯಿ ಶೇರು ಪೇಟೆ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 300 ಅಂಕಗಳ ಭಾರೀ ಕುಸಿತವನ್ನು ಅನುಭವಿಸಿದೆ.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ 75 ಅಂಕಗಳ ಕುಸಿತಕ್ಕೆ ಗುರಿಯಾಗಿದೆ.
ಬೆಳಗ್ಗೆ 10.30ರ ಹೊತ್ತಿಗೆ ಸೆನ್ಸೆಕ್ಸ್ 205.57 ಅಂಕಗಳ ಕುಸಿತದೊಂದಿಗೆ 31,869.21 ಅಂಕಗಳ ಮಟ್ಟದಲ್ಲೂ, ನಿಪ್ಟಿ 43.05 ಅಂಕಗಳ ಕುಸಿತದೊಂದಿಗೆ 9,872.90 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಜಪಾನಿನ ನಿಕ್ಕಿ ಇಂದು ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ 116 ಅಂಕಗಳ ಕುಸಿತಕ್ಕೆ ಗುರಿಯಾಗಿದೆ. ಹಾಂಕಾಂಗ್‌ನ ಹ್ಯಾಂಗ್‌ಸೆಂಗ್ 43.31 ಅಂಕಗಳ ಕುಸಿತವನ್ನು ಅನುಭವಿಸಿದೆ.
ಇಂದು ಬೆಳಗ್ಗಿನ ವಹಿವಾಟಿನಲ್ಲಿ ಐಟಿಸಿ, ರಿಲಯನ್ಸ್, ಎಸಿಸಿ, ಇನ್‌ಫೋಸಿಸ್, ಝೀ ಎಂಟರ್‌ಟೇನ್ ಮೆಂಟ್ ಶೇರುಗಳು ಅತೀ ಹೆಚ್ಚು ಕ್ರಿಯಾಶೀಲವಾಗಿದ್ದವು.
ಎಸಿಸಿ ಸನ್ ಫಾರ್ಮಾ, ಅಲ್‌ಟ್ರಾ ಟೆಕ್ ಸಿಮೆಂಟ್, ಭಾರ್ತಿ ಏರ್‌ಟೆಲ್, ಸಿಪ್ಲಾ ಶೇರುಗಳು ಟಾಪ್ ಗೇನರ್‌ಗಳಾಗಿದ್ದವು. ಐಟಿಸಿ, ಗೇಲ್, ರಿಲಯನ್ಸ, ಅರಬಿಂದೋ ಫಾರ್ಮಾ, ಹಿಂಡಾಲ್ಕೊ ಶೇರುಗಳು ಟಾಪ್ ಲೂಸರ್ ಆಗಿದ್ದವು.