ಮುಂಬಯಿ : ಡಾಲರ್ ಎದುರು ರೂಪಾಯಿ ಕುಸಿತ ನಿರಂತರವಾಗಿ ಸಾಗಿದ್ದು ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಅದು ಹದಿನಾರು ಪೈಸೆ ಕುಸಿದು, ಹೊಸ ಸಾರ್ವಕಾಲಿಕ ತಳಮಟ್ಟವಾಗಿ 71.37 ರೂ.ಗೆ ಇಳಿಯಿತು; ಮತ್ತು ಇದೇ ಕಾರಣಕ್ಕೆ ವಿದೇಶಿ ಬಂಡವಾಳದ ಹೊರ ಹರಿವು ಹೆಚ್ಚಿನ ಪ್ರಮಾಣದಲ್ಲಿ ಎಗ್ಗಿಲ್ಲದೇ ಸಾಗಿರುವುದು ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 122.72 ಅಂಕಗಳ ಕುಸಿತ ಕಾಣಲು ಕಾರಣವಾಯಿತು.
ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ನಿರಂತರವಾಗಿ ಏರುತ್ತಿರುವುದು ಮತ್ತು ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ನಿರಾಸಕ್ತಿಯ ವಾತಾವರಣ ನೆಲೆಸಿರುವುದು ಕೂಡ ಶೇರು ಪೇಟೆಯ ಕುಸಿತಕ್ಕೆ ಕಾರಣವಾಗಿದೆ.
ಬೆಳಗ್ಗೆ 11.15ರ ಸುಮಾರಿಗೆ ಸೆನ್ಸೆಕ್ಸ್ 35.23 ಅಂಕಗಳ ನಷ್ಟದೊಂದಿಗೆ 38,277.29 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 29.20 ಅಂಕಗಳ ನಷ್ಟದೊಂದಿಗೆ 11,553.20 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇನ್‌ಫೋಸಿಸ್, ಎಸ್‌ಬಿಐ, ರಿಲಯನ್ಸ್, ಟಿಸಿಎಸ್, ಸನ್ ಫಾರ್ಮಾ ಶೇರುಗಳು ಇಂದು ಬೆಳಗ್ಗಿನ ವಹಿವಾಟಿನಲ್ಲಿ ಅತೀ ಹೆಚ್ಚು ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ಇನ್‌ಫೋಸಿಸ್, ಎಚ್‌ಸಿಎಲ್ ಟೆಕ್, ಟಿಸಿಎವ್, ಟೆಕ್ ಮಹೀಂದ್ರ, ವಿಪ್ರೋ; ಟಾಪ್ ಲೂಸರ್‌ಗಳು : ಎಚ್‌ಯುಎಲ್, ಗ್ರಾಸಿಂ, ಏಶ್ಯನ್ ಪೇಂಟ್ಸ್, ಅಲ್‌ಟ್ರಾ ಟೆಕ್ ಸಿಮೆಂಟ್, ಇಂಡಸ್ ಇಂಡ್ ಬ್ಯಾಂಕ್.