ಮುಂಬಯಿ : ಆಗಸ್ಟ್ ತಿಂಗಳ ವಾಯಿದೆ ವಹಿವಾಟು ಚುಕ್ತಾ ಮಾಡುವ ಇಂದಿನ ಗುರುವಾರದಂದು ವಹಿವಾಟುದಾರರು ಮತ್ತು ಹೂಡಿಕೆದಾರರು ಎಚ್ಚರಿಕೆಯ ನಡೆ ತೋರಿದ ಕಾರಣ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ ಗಳಿಸಿದ ಏರಿಕೆಯನ್ನು ಅನಂತರದಲ್ಲಿ ಬಿಟ್ಟು ಕೊಟ್ಟು 70 ಅಂಕಗಳ ನಷ್ಟಕ್ಕೆ ಗುರಿಯಾಯಿತು.
ಏಶ್ಯನ್ ಶೇರುಪೇಟೆಗಳಲ್ಲಿ ಅಸ್ಥಿರತೆ ತೋರಿ ಬಂದಿರುವುದು, ವಿದೇಶೀ ಬಂಡವಾಳದ ಹೊರ ಹರಿವು ನಿರಂತರವಾಗಿರುವುದು ಮತ್ತು ಡಾಲರ್ ಎದುರು ರೂಪಾಯಿ ದೌರ್ಬಲ್ಯ ತೋರಿರುವುದೇ ಮುಂತಾಗಿ ಹಲವಾರು ಕಾರಣಗಳಿಂದ ಮುಂಬಯಿ ಶೇರು ಪೇಟೆ ಇಂದು ಹಿನ್ನಡೆಗೆ ಗುರಿಯಾಯಿತು.
ಬೆಳಗ್ಗೆ 11.30ರ ಹೊತ್ತಿಗೆ ಸೆನ್ಸೆಕ್ಸ್ 46.30 ಅಂಕಗಳ ನಷ್ಟದೊಂದಿಗೆ 38,676.63 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 22.10 ಅಂಕಗಳ ನಷ್ಟದೊಂದಿಗೆ 11,669.80 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿತ್ತು.
ರಿಲಯನ್ಸ್, ಎಸ್ ಬ್ಯಾಂಕ್, ಟಾಟಾ ಸ್ಟೀಲ್, ಎಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಶೇರುಗಳು ಇಂದಿನ ಬೆಳಗ್ಗಿನ ವಹಿವಾಟಿನಲ್ಲಿ ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ಒಎನ್‌ಜಿಸಿ, ಟಾಟಾ ಸ್ಟೀಲ್, ಯುಪಿಎಲ್, ಭಾರ್ತಿ ಏರ್‌ಟೆಲ್, ಐಟಿಸಿ; ಟಾಪ್ ಲೂಸರ್‌ಗಳು : ಟೆಕ್ ಮಹೀಂದ್ರ, ಇಂಡಸ್ ಇಂಡ್, ಎಚ್ ಸಿ ಎಲ್ ಟೆಕ್, ಕೋಟಕ್ ಮಹೀಂದ್ರ, ಎಚ್‌ಪಿಸಿಎಲ್.
ಡಾಲರ್ ಎದುರು ರೂಪಾಯಿ ಇಂದು 23 ಪೈಸೆಗಳ ನಷ್ಟಕ್ಕೆ ಗುರಿಯಾಗಿ ಸಾರ್ವಕಾಲಿಕ ಹೊಸ ತಳ ಮಟ್ಟದ ದಾಖಲೆಯ ರೂಪದಲ್ಲಿ 70.82 ರೂ. ಮಟ್ಟಕ್ಕೆ ಕುಸಿಯಿತು.