ಮುಂಬಯಿ :ಏಶ್ಯನ್ ಶೇರು ಪೇಟೆಯಲ್ಲಿನ ದುರ್ಬಲ ಪ್ರವೃತ್ತಿ, ರೂಪಾಯಿ ಸ್ಥಿತಿಗತಿ, ತೈಲ ಬೆಲೆ ಇಳಿಕೆ ಇವೆಲ್ಲವುಗಳ ನಡುವೆ ಎಚ್ಚರಿಕೆಯ ನಡೆ ತೋರಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 26 ಅಂಕಗಳ ನಷ್ಟವನ್ನು ಅನುಭವಿಸಿತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ 5.5 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 10,786.00 ಅಂಕಗಳ ಮಟ್ಟದಲ್ಲಿ ಆರಂಭಿಸಿತು.
ನಿನ್ನೆ ಗುರುವಾರ 150.57 ಅಂಕಗಳ ಏರಿಕೆಯನ್ನು ನಿರಂತರ ಮೂರನೇ ದಿನದ ಮುನ್ನಡೆಯಯಾಗಿ ದಾಖಲಿಸಿದ್ದ ಸೆನ್ಸೆಕ್ಸ್ ಇಂದು ಶುಕ್ರವಾರ ಬೆಳಗ್ಗೆ 10.45 ರ ಹೊತ್ತಿಗೆ 5.41 ಅಂಕಗಳ ಮುನ್ನಡೆಯನ್ನು ಪಡೆದುಕೊಂಡು 35,935.05 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 3.80 ಅಂಕಗಳ ಮುನ್ನಡೆಯೊಂದಿಗೆ 10,795.30 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಡಾಲರ್ ಎದುರು ರೂಪಾಯಿ ಇಂದು ಬೆಳಗ್ಗಿನ ವಹಿವಾಟಿನಲ್ಲಿ 14 ಪೈಸೆಗಳ ಚೇತರಿಕೆಯನ್ನು ಕಂಡು 71.82 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಇಂದು ಬೆಳಗ್ಗಿನ ವಹಿವಾಟಿನಲ್ಲಿ ಎಸ್ ಬ್ಯಾಂಕ್, ರಿಲಯನ್ಸ್, ಇನ್‌ಫೋಸಿಸ್, ಭಾರ್ತಿ ಏರ್‌ಟೆಲ್, ಮಾರುತಿ ಸುಜುಕಿ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ಭಾರ್ತಿ ಏರ್‌ಟೆಲ್, ಐಓಸಿ, ಏಶ್ಯನ್ ಪೇಂಟ್ಸ್, ಗ್ರಾಸಿಂ, ಅಲ್‌ಟ್ರಾ ಟೆಕ್ ಸಿಮೆಂಟ್; ಟಾಪ್ ಲೂಸರ್‌ಗಳು : ಬಜಾಜ್ ಆಟೋ, ಎಚ್ ಸಿ ಎಲ್ ಟೆಕ್, ಮಾರುತಿ ಸುಜುಕಿ, ಲಾರ್ಸನ್, ಎಚ್ ಡಿ ಎಫ್ ಸಿ.