ಮುಂಬಯಿ : ದೇಶದ ಸ್ಥೂಲ ಆರ್ಥಿಕಾಭಿವೃದ್ಧಿ ಅಂಕಿ ಅಂಶಗಳನ್ನು ಇಂದು ಸರಕಾರ ಬಿಡುಗಡೆಗೊಳಿಸಲಿರುವ ಹಿನ್ನೆಲೆಯಲ್ಲಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ 62.38 ಅಂಕಗಳ ಅಲ್ಪ ಮುನ್ನಡೆ ಗಳಿಸಿ 34,002.82 ಅಂಕಗಳ ಮಟ್ಟಕ್ಕೆ ಏರಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 3.55 ಅಂಕಗಳ ಮುನ್ನಡೆಯನ್ನು ದಾಖಲಿಸಿತು.
ಡಾಲರ್ ಎದುರು ರೂಪಾಯಿ ಇಂದು ಐದು ಪೈಸೆ ಕುಸಿತಕ್ಕೆ ಗುರಿಯಗಿ 65.36 ರೂ. ಮಟ್ಟದಲ್ಲಿ ದಾಖಲಾಯಿತು. ಇಂದಿನ ಆರಂಭಿಕ ವಹಿವಾಟಿನಲ್ಲಿ ಟಿಸಿಎಸ್, ಇನ್‌ಫೋಸಿಸ್, ಟಾಟಾ ಮೋಟರ್, ಒಎನ್‌ಜಿಸಿ, ವಿಪ್ರೋ, ಹೀರೋ ಮೋಟೋ ಕಾರ್ಪ್ ಶೇರುಗಳು ಶೇ.2.32ರ ಏರಿಕೆಯನ್ನು ದಾಖಲಿಸಿದವು.
ಬೆಳಗ್ಗೆ 11.10ರ ಹೊತ್ತಿಗೆ ಸೆನ್ಸೆಕ್ಸ್ 98.73 ಅಂಕಗಳ ಮುನ್ನಡೆಯೊಂದಿಗೆ 34,039.17 ಅಂಕಗಳ ಮಟ್ಟದಲ್ಲೂ ನಿಫ್ಟಿ 15.20 ಅಂಕಗಳ ಏರಿಕೆಯೊಂದಿಗೆ 10,432.40 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಟಿಸಿಎಸ್, ಇನ್‌ಫೋಸಿಸ್, ಬಿಪಿಸಿಎಲ್, ಐಸಿಐಸಿಐ ಬ್ಯಾಂಕ್, ಎಸ್‌ಬಿಐ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.