Advertisement

ಡಾಲರ್‌ ಎದುರು ರೂಪಾಯಿ ಕುಸಿತ: ಸೆನ್ಸೆಕ್ಸ್‌ 106 ಅಂಕ ನಷ್ಟ

05:16 AM Jan 18, 2019 | udayavani editorial |

ಮುಂಬಯಿ : ಡಾಲರ್‌ ಎದುರು ರೂಪಾಯಿಯ ದೌರ್ಬಲ್ಯವನ್ನು ಅನುಸರಿಸಿ ಫಾರ್ಮಾ ಮತ್ತು ಬ್ಯಾಂಕಿಂಗ್‌ ರಂಗದ ಶೇರುಗಳು ಭರಾಟೆ ಮಾರಾಟವನ್ನು ಕಂಡ ಪ್ರಯುಕ್ತ ಮುಂಬಯಿ ಶೇರು ಪೇಟೆ ಇಂದು ಶುಕ್ರವಾರದ ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ 80 ಅಂಕಗಳ ಕುಸಿತವನ್ನು ಕಂಡಿತು. 

Advertisement

ಬೆಳಗ್ಗೆ 10.45ರ ಹೊತ್ತಿಗೆ ಸೆನ್ಸೆಕ್ಸ್‌  106.87 ಅಂಕಗಳ ನಷ್ಟದೊಂದಿಗೆ 36,267.21 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 39.20 ಅಂಕಗಳ ನಷ್ಟದೊಂದಿಗೆ 10,866.00 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು. 

ಡಾಲರ್‌ ಎದುರಿನ ಇಂದಿನ ಆರಂಭಿಕ ವಹಿವಾಟಿನಲ್ಲಿ ರೂಪಾಯಿ 21 ಪೈಸೆಗಳ ಕುಸಿತವನ್ನು ಕಂಡು 71.24 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು. 

ಇಂದಿನ ಬೆಳಗ್ಗಿನ ವಹಿವಟಿನಲ್ಲಿ ಸನ್‌ ಫಾರ್ಮಾ, ರಿಲಯನ್ಸ್‌, ಎಸ್‌ ಬ್ಯಾಂಕ್‌, ಎಚ್‌ ಯು ಎಲ್‌, ಎಕ್ಸಿಸ್‌ ಬ್ಯಾಂಕ್‌ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು. 

Advertisement

Udayavani is now on Telegram. Click here to join our channel and stay updated with the latest news.

Next