ಮುಂಬಯಿ : ಇತರ ಏಶ್ಯನ್ ಶೇರು ಪೇಟೆಗಳಲ್ಲಿ ಇಂದು ಮಿಶ್ರ ಪ್ರತಿಕ್ರಿಯೆ ಕಂಡು ಬಂದಿರುವುದನ್ನು ಅನುಸರಿಸಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ ಹೂಡಿಕೆದಾರರ ಎಚ್ಚರಿಕೆಯ ನಡೆಯ ಕಾರಣ 13.51 ಅಂಕಗಳ ಅಲ್ಪ ಏರಿಕೆಯನ್ನು ದಾಖಲಿಸಿತು.
ಡಾಲರ್ ಎದುರು ಬಲವರ್ಧನೆ ಕಾಣುತ್ತಿರುವ ರೂಪಾಯಿ, ತೈಲ ಬೆಲೆಯಲ್ಲಿನ ಇಳಿಕೆ ಇವೇ ಮೊದಲಾದ ಕಾರಣಗಳು ಮುಂಬಯ ಶೇರು ಪೇಟೆಯ ಮೇಲೆ ಧನಾತ್ಮಕ ಪರಿಣಾಮ ಬೀರಿವೆ.
ಇಂದು ಬೆಳಗ್ಗೆ 11 ಗಂಟೆಯ ಸುಮಾರಿಗೆ ಸೆನ್ಸೆಕ್ಸ್ 66.38 ಅಂಕಗಳ ನಷ್ಟಕ್ಕೆ ಗುರಿಯಾಗಿ 36,378.26 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 12.80 ಅಂಕಗಳ ನಷ್ಟದೊಂದಿಗೆ 10,910.10 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ರಿಲಯನ್ಸ್, ಸನ್ ಫಾರ್ಮಾ, ಎಸ್ ಬ್ಯಾಂಕ್, ಝೀ ಎಂಟರ್‌ಟೇನ್‌ಮೆಂಟ್, ಏಶ್ಯನ್ ಪೇಂಟ್ಸ್ ಶೇರುಗಳು ಇಂದು ಬೆಳಗ್ಗಿನ ವಹಿವಾಟಿನಲ್ಲಿ ಅತ್ಯಂತ ಸಕ್ರಿಯವಾಗಿದ್ದವು.
ಡಾಲರ್ ಎದುರು ಇಂದಿನ ಆರಂಭಿಕ ವಹಿವಾಟಿನಲ್ಲಿ ರೂಪಾಯಿ 29 ಪೈಸೆಗಳ ಏರಿಕೆಯನ್ನು ಕಂಡು 71.15 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.