ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ 33,940 ಅಂಕಗಳ ಮಟ್ಟವನ್ನೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 10,493 ಅಂಕಗಳ ಮಟ್ಟವನ್ನೂ ಇಂದು ಶುಕ್ರವಾರದ ವಹಿವಾಟಿನ ವಹಿವಾಟಿನ ಅಂತ್ಯದಲ್ಲಿ ಸಾರ್ವಕಾಲಿಕ ಎತ್ತರವನ್ನು ತಲುಪುವ ಸಾಧನೆಯನ್ನು ದಾಖಲಿಸಿದವು. ಮೂರು ತಿಂಗಳ ದಾಖಲೆಯ ಎತ್ತರವನ್ನು ತಲುಪಿದ ಬಳಿಕ ಮುಂಬಯಿ ಶೇರು ಪೇಟೆ ಸಾಧನೆ ಮಾಡಿರುವುದು ಗಮನಾರ್ಹವಾಗಿದೆ.
ದಿನಾಂತ್ಯಕ್ಕೆ ಸೆನ್ಸೆಕ್ಸ್ 184.02 ಅಂಕಗಳ ಏರಿಕೆಯನ್ನು ದಾಖಲಿಸಿದರೆ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 52.70 ಅಂಕಗಳ ಲಾಭವನ್ನು ದಾಖಲಿಸಿತು.
ಡಾಲರ್ ಎದುರು ರೂಪಾಯಿ ವಿನಿಮಯ ದರ ಇಂದು ಮೂರು ತಿಂಗಳ ಎತ್ತರವನ್ನು ತಲುಪಿದುದು ಕೂಡ ಮುಂಬಯಿ ಶೇರು ಪೇಟೆಗೆ ಇನ್ನಷ್ಟು ಬೂಸ್ಟ್ ನೀಡಿತು.
ಇಂದಿನ ಟಾಪ್ ಗೇನರ್‌ಗಳು : ಒಎನ್‌ಜಿಸಿ, ಬಜಾಜ್ ಫಿನಾನ್ಸ್, ಡಿಸಿಎಸ್, ಟಾಟಾ ಪವರ್, ಹಿಂಡಾಲ್ಕೋ . ಇಂದಿನ ಟಾಪ್ ಲೂಸರ್‌ಗಳು : ಅಲ್‌ಟ್ರಾ ಟೆಕ್ ಸಿಮೆಂಟ್, ಐಡಿಯಾ ಸೆಲ್ಯುಲರ್, ಐಡಿಯಾ ಸೆಲ್ಯುಲರ್, ಲೂಪಿನ್, ಡಾ. ರೆಡ್ಡಿ, ಕೋಲ್ ಇಂಡಿಯಾ.
ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಇಂದು 3,105 ಶೇರುಗಳು ವ್ಯವಹಾರಕ್ಕೆ ಒಳಪಟ್ಟವು; 1,675 ಶೇರುಗಳು ಮುನ್ನಡೆ ಸಾಧಿಸಿದವು; 1,233 ಶೇರುಗಳು ಹಿನ್ನಡೆಗೆ ಗುರಿಯಾದವು; 197 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.