ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಇಂದು ಬುದವಾರದ ಆರಂಭಿಕ ವಹಿವಾಟಿನಲ್ಲಿ 83.65 ಅಂಕಗಳ ಏರಿಕೆಯನ್ನು ಸಾಧಿಸುವ ಮೂಲಕ ಈ ಹಿಂದಿನ ಎಲ್ಲ ದಾಖಲೆಗಳನ್ನು ಹಿಂದಿಕ್ಕಿ 37,690.23 ಅಂಕಗಳ ಮಟ್ಟದಲ್ಲಿ ಹೊಸ ಎತ್ತರದ ದಾಖಲೆಯನ್ನು ರೂಪಿಸಿತು.
ಕಳೆದ ಏಳು ದಿನಗಳ ನಿರಂತರ ಗೆಲುವಿನ ಓಟದಲ್ಲಿ ತೊಡಗಿರುವ ಸೆನ್ಸೆಕ್ಸ್ ಒಟ್ಟು 1,110.21 ಅಂಕಗಳನ್ನು ಸಂಪಾದಿಸಿದೆ. ನಿನ್ನೆಯ ವಹಿವಾಟನ್ನು ಸೆನ್ಸೆಕ್ಸ್ ದಾಖಲೆಯ 37,606.58 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತ್ತು.
ಇಂದು ಬೆಳಗ್ಗೆ 10.45ರ ಹೊತ್ತಿಗೆ ಸೆನ್ಸೆಕ್ಸ್ 26.16 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 37,632.74 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ 18.20 ಅಂಕಗಳ ಏರಿಕೆಯೊಂದಿಗೆ 11,374.70 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಟಾಟಾ ಮೋಟರ್, ರಿಲಯನ್ಸ್, ಎಸ್‌ಬಿಐ, ಮಾರುತಿ ಸುಜುಕಿ, ಬಜಾಜ್ ಫಿನಾನ್ಸ್ ಶೇರುಗಳು ಅತೀ ಹೆಚ್ಚು ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ಎಚ್‌ಪಿಸಿಎಲ್, ಬಜಾಜ್ ಫಿನಾನ್ಸ್, ಬಜಾಜ್ ಫಿನ್ ಸರ್ವ್, ಬಿಪಿಸಿಎಲ್, ಲೂಪಿನ್; ಟಾಪ್ ಲೂಸರ್‌ಗಳು : ಟಾಟಾ ಮೋಟರ್, ಈಚರ್ ಮೋಟರ್, ಮಾರುತಿ ಸುಜುಕಿ, ಐಡಿಯಾ ಸೆಲ್ಯುಲರ್, ಎಕ್ಸಿಸ್ ಬ್ಯಾಂಕ್.
ಡಾಲರ್ ಎದುರು ರೂಪಾಯಿ ಇಂದು ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ 5 ಪೈಸೆಯಷ್ಟು ಕುಸಿದು 68.59 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.