ಮುಂಬಯಿ : ಹೂಡಿಕೆದಾರರು ಮತ್ತು ವಹಿವಾಟುದಾರರು ಆಯ್ದ ಬ್ಲೂ ಚಿಪ್ ಶೇರುಗಳ ಖರೀದಿಯಲ್ಲಿ ತೋರಿದ ಆಸಕ್ತಿಯ ಫಲವಾಗಿ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಇಂದು ಶುಕ್ರವಾರದ ಬೆಳಗ್ಗಿನ ವಹಿವಾಟಿನಲ್ಲಿ 51 ಅಂಕಗಳ ಏರಿಕೆಯನ್ನು ಸಾಧಿಸಿತು.
ಬೆಳಗ್ಗೆ 10.15ರ ಹೊತ್ತಿಗೆ ಸೆನ್ಸೆಕ್ಸ್ 122.72 ಅಂಕಗಳ ಏರಿಕೆಯನ್ನು ಸಾಧಿಸಿ 32,027.12 ಅಂಕಗಳ ಮಟ್ಟವನ್ನು ತಲುಪಿತಾದರೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 36.75 ಅಂಕಗಳ ಏರಿಕೆಯನ್ನು ದಾಖಲಿಸಿ 9,910.05 ಅಂಕಗಳ ಮಟ್ಟವನ್ನು ತಲುಪಿತು.
ರಿಲಯನ್ಸ್, ವಿಪ್ರೋ, ಐಟಿಸಿ, ಎಕ್ಸಿಸ್ ಬ್ಯಾಂಕ್, ಎಚ್‌ಯುಎಲ್ ಶೇರುಗಳು ಇಂದು ಬೆಳಗ್ಗಿನ ವಹಿವಾಟಿನಲ್ಲಿ ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳಾಗಿ ವಿಪ್ರೋ, ರಿಲಯನ್ಸ್, ಕೋಲ್ ಇಂಡಿಯಾ, ಎಚ್‌ಸಿಎಲ್ ಟೆಕ್, ಟೆಕ್ ಮಹೀಂದ್ರ ಶೇರುಗಳು ಕಾಣಿಸಿಕೊಂಡವು. ಲೂಪಿನ್ ಐಡಿಯಾ ಸೆಲ್ಯುಲರ್, ಭಾರ್ತಿ ಏರ್‌ಟೆಲ್, ಸಿಪ್ಲಾ, ಪವರ್ ಗ್ರಿಡ್ ಟಾಪ್ ಲೂಸರ್ ಎನಿಸಿದವು.
ರೂಪಾಯಿ ಇಂದು 8 ಪೈಸೆಯಷ್ಟು ಬಲಗೊಂಡು 64.35 ರೂ.ಗಳ ವಿನಿಮಯ ದರ ದಾಖಲಿಸಿತು.