Advertisement

ಮುಂಬಯಿ ಶೇರು: ಏರುಪೇರಿನ ವಹಿವಾಟಿನಲ್ಲಿ ಅಲ್ಪ ಗಳಿಕೆ

04:25 PM Oct 09, 2017 | |

ಮುಂಬಯಿ : ರಫ್ತುದಾರರು ಮತ್ತು ಸಣ್ಣ ಹಾಗೂ ಮಧ್ಯಮ ಉದ್ದಿಮೆದಾರರಿಗೆ ಜಿಎಸ್‌ಟಿ ರಿಯಾಯಿತಿ ಘೋಷಿಸಲಾದುದನ್ನು ಅನುಸರಿಸಿ ಇಂದು ಗರಿಗೆದರಿದ ಮುಂಬಯಿ ಶೇರು ಪೇಟೆ ದಿನದ ವಹಿವಾಟಿನ ಉದ್ದಕ್ಕೂ ಭಾರೀ ಏರು ಪೇರುಗಳಿಗೆ ಗುರಿಯಾದ ಹೊರತಾಗಿಯೂ ಇಂದಿನ ಸೋಮವಾರದ ವಹಿವಾಟನ್ನು 32.67 ಅಂಕಗಳ ಅಲ್ಪ ಗಳಿಕೆಯೊಂದಿಗೆ 31,846.89 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

Advertisement

ಇಂದಿನ ವಹಿವಾಟಿನಲ್ಲಿ 10,000 ಅಂಕಗಳ ಮನೋ ಪ್ರಾಬಲ್ಯದ ಮಟ್ಟವನ್ನು ಮರಳಿ ಸಂಪಾದಿಸಿದ್ದ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ದಿನಾಂತ್ಯಕ್ಕೆ ಕುಸಿತವನ್ನು ಕಂಡು ದಿನದ ವಹಿವಾಟನ್ನು 9.05 ಅಂಕಗಳ ಮುನ್ನಡೆಯೊಂದಿಗೆ 9,988.75 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

ಡಾಲರ್‌ ಎದುರು ರೂಪಾಯಿ ವಿನಿಮಯ ದರ ಇಂದು ಆರು ಪೈಸೆಯಷ್ಟು ಸುಧಾರಿಸಿದರೂ ಹೂಡಿಕೆದಾರರು ಮತ್ತು ವಹಿವಾಟುದಾರರು ಸೆಪ್ಟಂಬರ್‌ ತ್ತೈಮಾಸಿಕ ಫ‌ಲಿತಾಂಶಗಳನ್ನು ಎಚ್ಚರಿಕೆಯಿಂದ ಎದುರು ನೋಡುತ್ತಿರುವುದು ಇಂದಿನ ವಹಿವಾಟಿನಲ್ಲಿ ವ್ಯಕ್ತವಾಗಿತ್ತು.

ಇಂದಿನ ಟಾಪ್‌ ಗೇನರ್‌ಗಳು : ಕೋಲ್‌ ಇಂಡಿಯಾ, ಟೆಕ್‌ ಮಹೀಂದ್ರ, ಡಾ. ರೆಡ್ಡಿ, ಎಸ್‌ ಬ್ಯಾಂಕ್‌, ಅದಾನಿ ಪೋರ್ಟ್‌; ಟಾಪ್‌ ಲೂಸರ್‌ಗಳು : ಅರಬಿಂದೋ ಫಾರ್ಮಾ, ಪವರ್‌ ಗ್ರಿಡ್‌, ಒಎನ್‌ಜಿಸಿ, ಬಿಪಿಸಿಎಲ್‌, ಗೇಲ್‌.

Advertisement

Udayavani is now on Telegram. Click here to join our channel and stay updated with the latest news.

Next