ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಕ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ 34,565.63 ಅಂಕಗಳನ್ನು ತಲುಪುವ ಮೂಲಕ ಹೊಸ ಸಾರ್ವಕಾಲಿಕ ಎತ್ತರವನ್ನು ಏರಿದೆ. ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಕೂಡ ಇದೇ ರೀತಿಯಲ್ಲಿ ಸಾರ್ವಕಾಲಿಕ ಎತ್ತರವನ್ನು ಕಂಡಿದೆ.
ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಇಂದು ನಿರಂತರ ನಾಲ್ಕನೇ ದಿನದ ವಹಿವಾಟಿನಲಿ ಏರು ಹಾದಿಯಲ್ಲಿ ಸಾಗಿರುವುದು ಗಮನಾರ್ಹವಾಗಿದೆ.ಈ ಅವಧಿಯಲ್ಲಿ ಅದು 650 ಅಂಕಗಳನ್ನು ಸಂಪಾದಿಸಿದೆ.
ಬೆಳಗ್ಗೆ 10.45ರ ಹೊತ್ತಿಗೆ ಸೆನ್ಸೆಕ್ಸ್ 19.19 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 34,462.38 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 2 ಅಂಕಗಳ ಏರಿಕೆಯೊಂದಿಗೆ 10,639.00 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಕೋಲ್ ಇಂಡಿಯಾ, ಟೆಕ್ ಮಹೀಂದ್ರ, ಐಡಿಯಾಸೆಲ್ಯುಲರ್, ಅದಾನಿ ಪೋರ್ಟ್, ಎಚ್‌ಪಿಸಿಎಲ್ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಆರಂಭಿಕ ವಹಿವಾಟಿನಲ್ಲಿಂದು ಒಟ್ಟು 2,617 ಶೇರುಗಳು ವಹಿವಾಟಿಗೆ ಒಳಪಟ್ಟಿದ್ದವು; 1,442 ಶೇರುಗಳು ಮುನ್ನಡೆ ಸಾಧಿಸಿದ್ದವು; 1,065 ಶೇರುಗಳು ಹಿನ್ನಡೆಗೆ ಗುರಿಯಾಗಿದ್ದವು; 110 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.