ಮುಂಬಯಿ : ಭಾರತೀಯ ರಿಸರ್ವ್ ಬ್ಯಾಂಕ್ ಇಂದು ಬುಧವಾರ ತನ್ನ ದ್ವೆ„ಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಲಿದ್ದು ಅದಕ್ಕೆ ಮುನ್ನವೇ ಮುಂಬಯಿ ಶೇರು ಮಾರುಕಟ್ಟೆ ಇಂದು ಬೆಳಗ್ಗಿನ ತನ್ನ ಆರಂಭಿಕ ವಹಿವಾಟಿನಲ್ಲಿ ಸಂಪಾದಿಸಿದ್ದ ಅಂಕಗಳ ಬಹುಪಾಲನ್ನು ಬಿಟ್ಟುಕೊಟ್ಟಿದೆ.
ಬೆಳಗ್ಗೆ 10.40ರ ಹೊತ್ತಿಗೆ ಸೆನ್ಸೆಕ್ಸ್ 15.97 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 32,591.14 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಆರು ಅಂಕಗಳ ನಷ್ಟದೊಂದಿಗೆ 10,108.70 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ರಿಲಯನ್ಸ್, ಹೀರೋ ಮೋಟೋ ಕಾರ್ಪ್, ಎಸ್ ಬ್ಯಾಂಕ್, ಲೂಪಿನ್, ಬಿಪಿಸಿಎಲ್ ಶೇರುಗಳು ಇಂದು ಬೆಳಗ್ಗೆ ಅತ್ಯಂತ ಕ್ರಿಯಾಶೀಲವಾಗಿದ್ದವು.
ಹೀರೋ ಮೋಟೋ ಕಾರ್ಪ್, ಎನ್‌ಟಿಪಿಸಿ, ಲೂಪಿನ್, ಬಾಶ್, ರಿಲಯನ್ಸ್ ಶೇರುಗಳು ಟಾಪ್ ಗೇನರ್‌ಗಳಾಗಿದ್ದವು. ಹಿಂಡಾಲ್ಕೊ, ಲಾರ್ಸನ್, ಡಾ. ರೆಡ್ಡೀಸ್ ಲ್ಯಾಬ್, ಒಎನ್‌ಜಿಸಿ, ಬಜಾಜ್ ಆಟೋ ಶೇರುಗಳು ಟಾಪ್ ಲೂಸರ್‌ಗಳಾಗಿದ್ದವು.
ಇಂದಿನ ಆರಂಭಿಕ ವಹಿವಾಟಿನಲ್ಲಿ ವ್ಯವಹಾರಕ್ಕೆ ಒಳಪಟ್ಟ ಶೇರುಗಳ ಪೈಕಿ 522 ಶೇರುಗಳು ಮುನ್ನಡೆ ಸಾಧಿಸಿದವು; 225 ಶೇರುಗಳು ಹಿನ್ನಡೆಗೆ ಗುರಿಯಾದವು; 47 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.
ಆರ್ ಬಿ ಐ ಗವರ್ನರ್ ಊರ್ಜಿತ್ ಪಟೇಲ್ ಅವರಿಂದು ಶೇ.0.25ರಷ್ಟು ಬಡ್ಡಿ ದರ ಇಳಿಕೆಯನ್ನು ಪ್ರಕಟಿಸುವ ಸಾಧ್ಯತೆ ಎಂದು ವಿಶ್ಲೇಷಕರು ಹೇಳಿದ್ದಾರೆ.